Hot Posts

6/recent/ticker-posts

ನಿಲೇಕಣಿ ಶ್ರೀ ಗಣೇಶ ಮಂದಿರದಲ್ಲಿ ಗಣೇಶ ಚತುರ್ಥಿ ಕಾರ್ಯಕ್ರಮಗಳು:

ಶಿರಸಿ: ಇಲ್ಲಿನ ಶ್ರೀ ಗಣೇಶ ಮಂದಿರದಲ್ಲಿ ಶ್ರೀ ಕ್ರೋಧಿನಾಮ ನಾಮ ಸಂವತ್ಸರದ ಅಂಗವಾಗಿ ಸಪ್ಟೆಂಬರ್ 7 ಶನಿವಾರದಿಂದ ರಿಂದ 16 ಸೋಮವಾರದರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದಿನಾಂಕ 7 ಶನಿವಾರ ಮಧ್ಯಾಹ್ನ 12:30ಕ್ಕೆ ಚಂದನಾಭಿಷೇಕ ಸಹಸ್ರ ದುರ್ವಾರ್ಚನೆ, ಉಪನಿಷತ್ ಪಠಣಪೂರ್ವಕ ಶ್ರೀ ಪ್ರಸನ್ನ ಗಣಪತಿಗೆ ಮಹಾಪೂಜೆ ನಡೆಯಲಿದೆ. ದಿನಾಂಕ 13 ಶುಕ್ರವಾರ ಮಧ್ಯಾಹ್ನ 12:30ಕ್ಕೆ ಶ್ರೀ ಸತ್ಯ ಗಣಪತಿ ವೃತ, ದಿನಾಂಕ 15 ರವಿವಾರ ಮದ್ಯಾಹ್ನ 12.30ಕ್ಕೆ ಶ್ರೀ ಸತ್ಯನಾರಾಯಣ ಕಥೆ, ದಿನಾಂಕ 16 ಸೋಮವಾರ ಗಣ ಹವನ ಶ್ರೀದೇವರಿಗೆ ಪಾಯಸ ಕೊಟ್ಟೆ ಕಡುಬಿನ ನೈವೇದ್ಯ, ಮಹಾಮಂಗಳಾರತಿ ನಡೆಯಲಿದೆ. ದಿನಾಂಕ 16ರ ಸಾಯಂಕಾಲ 8:00 ಗಂಟೆಗೆ ಶ್ರೀದೇವರ ಉತ್ಸವಮೂರ್ತಿಯ ಶೋಭಾ ಯಾತ್ರೆ ಮಂದಿರದ ಅವಾರದಲ್ಲಿ ಹಾಗೂ ಪಟ್ಟ ಕಾಣಿಕೆ ಸಮರ್ಪಣೆ ಅಷ್ಟಾವಧಾನ ಸೇವೆ ಮತ್ತು ರಂಗಮದ್ಯಸ್ಥಿತ ಪ್ರಸನ್ನ ಗಣಪತಿಯ ರಂಗಪೂಜೆ ನಡೆಯಲಿದೆ. ಗಣೇಶ ಚತುರ್ಥಿ ನಿತ್ಯ ಪೂಜೆಗೂ ಕೂಡ ಅವಕಾಶವಿದೆ ಪ್ರತಿನಿತ್ಯ ಪೂಜಾ ಸಮಯ ಮಧ್ಯಾಹ್ನ 12 ಹಾಗೂ ರಾತ್ರಿ 8ಕ್ಕೆ ನಡೆಯುತ್ತದೆ 

ವಯಕ್ತಿಕ ರಂಗಪೂಜೆ ದಿನಾಂಕ 08-09-2024 ರಿಂದ 15-09-2024ರವರೆಗೆ ಮಧ್ಯಾಹ್ನ ಹಾಗೂ ಸಾಯಂಕಾಲ ರಂಗಪೂಜೆ ಸೇವೆ ಸಲ್ಲಿಸಬಹುದು.

ದಿನಾಂಕ 03-10-2024 ಗುರುವಾರದಿಂದ 12-10-2024 ಶನಿವಾರದವರೆಗೆ ನವರಾತ್ರಿಯಂದು ಶ್ರೀಗಣೇಶ ಮಂದಿರದಲ್ಲಿ ಶ್ರೀ ದುರ್ಗಾಸಪ್ತಪತಿ ಪಾರಾಯಣ ನಡೆಯುತ್ತದೆ.

ದಿನಾಂಕ 02-11-2024, ಶನಿವಾರದಿಂದ ಕಾರ್ತಿಕಮಾಸ ಪ್ರಾರಂಭವಾಗಿ 01-12-2024ರವರೆಗೆ ಶ್ರೀ ಗಣೇಶ ಮಂದಿರದಲ್ಲಿ ಕಾರ್ತಿಕ ದೀಪೋತ್ಸವವು ನಡೆಯುತ್ತದೆ.

'ಭಕ್ತಾಧಿಗಳು ಈ ಎಲ್ಲಾ ಸೇವೆಯಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಕೋರಲಾಗಿದೆ.

ಪ್ರತಿಕ್ರಿಯೆ

Post a Comment

0 Comments