ಶಿರಸಿ: ತಾಲೂಕಿನ ಹೆಗಡೆಕಟ್ಟಾದ ಸಾರ್ವಜನಿಕ ಶ್ರೀ ಗಜಾನನೋತ್ಸವ ಸಮಿತಿ ಗಣೇಶೋತ್ಸವಕ್ಕೆ 38 ನೆಯ ವರ್ಷದ ಸಂಭ್ರಮ. ದಿನಾಂಕ 07-09-2024 ನೇ ಶನಿವಾರ ಬೆಳಗ್ಗೆ 11-00 ಗಂಟೆಗೆ ಶ್ರೀ ಮಹಾಗಣಪತಿ ಪ್ರತಿಷ್ಠಾಪನೆ, ಪೂಜೆ, ಮಂಗಳಾರತಿ, ದಿನಾಂಕ 08-09-2024ನೇ ರವಿವಾರ ಮಧ್ಯಾಹ್ನ 12-00 ಗಂಟೆಗೆ ಪೂಜೆ, ಮಧ್ಯಾಹ್ನ 3-00 ಗಂಟೆಗೆ ಮಹಾಮಂಗಳಾರತಿ, ಮೆರವಣಿಗೆ, ಶ್ರೀ ಗಣಪತಿ ವಿಸರ್ಜನೆ, ಮುಕ್ತಾಯ ಗೊಳ್ಳಲಿದೆ.
ರಾಮ ಮರಾಠಿ ಮತ್ತು ಲಕ್ಷ್ಮಣ ಮರಾಠಿ, ಹಕ್ಕಿಗದ್ದೆ ಗಣಪತಿ ಮೂರ್ತಿ ತಯಾರಿಸಿದ್ದು ಗಣಪತಿ ಮೂರ್ತಿಯ ಸೇವೆ ಮಧಸೂದನ ಮತ್ತು ಕು. ಸೂರ್ಯನಾರಾಯಣ ದೇವರು ಭಟ್ಟ ಇವರದ್ದಾಗಿದೆ. ಮನರಂಜನಾ ಕಾರ್ಯಕ್ರಮಗಳು 07-09-2024, ರ ಸಾಯಂಕಾಲ ನಡೆಯಲಿದ್ದು 5.00 ಗಂಟೆಗೆ ಮಕ್ಕಳಿಂದ ಛದ್ಮವೇಷ ಸಂಜೆ 6.00 ರಿಂದ ಸಂತ ಭದ್ರಗಿರಿ ಅಚ್ಯುತದಾಸರ ಶಿಷ್ಯ ಕಥಾ ಕೀರ್ತನ ಕೋವಿದ ಸಿರಿವಿಠಲಾಂಕಿತ ಈಶ್ವರದಾಸ ಕೊಪ್ಪೇಸರ ಇವರಿಂದ ಹರಿಕೀರ್ತನೆ ನಡೆಯಲಿದೆ ಈ ಎಲ್ಲ ಕಾರ್ಯಕ್ರಮಗಳಿಗೆ ಗುರುಪಾದ ಹೆಗಡೆ ಅಮಚಿಮನೆ ಅಧ್ಯಕ್ಷರು, ಮಂಜುನಾಥ ಹೆಗಡೆ ಹೆಗಡೆಕಟ್ಟಾ ಎಸ್. ಎಂ. ಹೆಗಡೆ, ಮಕ್ಕಳತಾಯ್ಮನೆ ಗೌರವಾಧ್ಯಕ್ಷರು, ಕಾರ್ಯಕಾರಿ ಸಮಿತಿ. ಅನಂತ ದಾಸ ನಾಯ್ಕ, ಜಗಳೆಮನೆ ಗೌರವ ಕಾರ್ಯದರ್ಶಿ ಸ್ವಾಗತ ಕೋರಿದ್ದಾರೆ.
0 Comments