ಅಗಸ್ಟ್ ಅಗಸ್ಟ್ 8 ರಂದು ವಾಣಿಜ್ಯ ತೆರಿಗೆಯ ನಿವೃತ್ತ ಅಧಿಕಾರಿಗಳಾದ ಸುಬ್ರಾಯ ಎಂ ಹೆಗಡೆ ಗೌರಿಬಣ್ಣಿಗೆ ಅವರು ಯು.ಪಿ.ಎಸ್.ಸಿ ಮತ್ತು ಕೆ.ಪಿ.ಎಸ್.ಸಿ ಅವರು ನಡೆಸುವ ಐ.ಎ.ಎಸ್ ಮತ್ತು ಕೆ.ಎ.ಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಹೇಗಿರಬೇಕು ಎಂದು ವಿವರಿಸಿದರು. ನಿವೃತ್ತ ಪ್ರಾಧ್ಯಾಪಕರಾದ ಆರ್ ಎಸ್ ಹೆಗಡೆ ಅವರು ಸ್ಪರ್ಧಾತ್ಮಕ ಪರೀಕ್ಷೆಗಳು ನಮ್ಮಲ್ಲಿ ವಿಭಿನ್ನವಾಗಿ ಚಿಂತಿಸುವ ಕಲೆಯನ್ನು ಕಲಿಸುತ್ತದೆ ಎಂದು ವಿವರಿಸಿದರು.
ನಿವೃತ್ತ ಅಧಿಕಾರಿಗಳಾದ ಜಿ .ಎಸ್.ಹೆಗಡೆ ಅವರು ನೇಚರ್ ಈಸ್ ಎ ಗ್ರೇಟ್ ಟೀಚರ್ ಎನ್ನುತ್ತಾ ಪ್ರಕೃತಿಯಿಂದ, ಪತ್ರಿಕೆಗಳಿಂದ ಜ್ಞಾನವನ್ನು ವರ್ಧಿಸಿಕೊಳ್ಳಬಹುದು ಎಂಬ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮವು ಗಣಪತಿ ಸ್ತುತಿಯೊಂದಿಗೆ ಸಿಂಚನಾ ಶೆಟ್ಟಿಯಿಂದ ಆರಂಭಗೊಂಡಿತು. ಲಯನ್ ಅಶ್ವತ್ ಹೆಗಡೆ ಎಲ್ಲರನ್ನೂ ಸ್ವಾಗತಿಸಿದರು. ಪ್ರಾಂಶುಪಾಲ ಶಶಾಂಕ ಹೆಗಡೆಯವರು ಪ್ರಾಸ್ತಾವಿಕವನ್ನು ನುಡಿದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಲಯನ್ ಕೆ.ಬಿ ಲೋಕೇಶ್ ಹೆಗಡೆ ಅವರು ಉಪಸ್ಥಿತರಿದ್ದರು. ಸಿಎ ವೇಣುಗೋಪಾಲ್ ಹೆಗಡೆ ಅವರು ವಂದನಾರ್ಪಣೆಯನ್ನು ಗೈದರು. ಕಾರ್ಯಕ್ರಮವನ್ನು ಗಣಪತಿ ಗೌಡ ಸಹ ಶಿಕ್ಷಕರು ಆಂಗ್ಲ ಮಾಧ್ಯಮ ಪ್ರೌಢಶಾಲೆ ಇವರು ನಿರೂಪಿಸಿದರು.
0 Comments