ಕಾರವಾರ: ಮೂಡಾ ಹಗರಣ ಸೇರಿದಂತೆ ಭ್ರಷ್ಟಚಾರದ ಸರಮಾಲೆಯನ್ನೇ ಹೊದ್ದುಕೊಂಡಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ನಡೆಯನ್ನು ವಿರೋಧಿಸಿ ಭಾರತೀಯ ಜನತಾ ಪಕ್ಷ ಬೆಂಗಳೂರಿನಿಂದ ಮೈಸೂರಿನವರೆಗೆ ಹಮ್ಮಿಕೊಂಡಿರುವ 'ಮೈಸೂರು ಚಲೋ' ಪಾದಯಾತ್ರೆಗೆ ರಾಜ್ಯಾದ್ಯಂತದಿಂದ ರೈತ ಮೋರ್ಚಾದ ಪದಾಧಿಕಾರಿಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡರು.
ಪಾದಯಾತ್ರೆಯಲ್ಲಿ ಲಕ್ಷಕ್ಕೂ ಅಧಿಕ ರೈತಮೋರ್ಚಾದ ಕಾರ್ಯಕರ್ತರು ಭಾಗಿಯಾಗಿ, ಭ್ರಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ಘೋಷಣೆ ಕೂಗಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಈ ಬೃಹತ್ ಪಾದಯಾತ್ರೆಗೆ ಜಿಲ್ಲೆಯಿಂದ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ, ಜಿಲ್ಲಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ, ಜಿಲ್ಲಾ ಭಾಜಪಾ ಪ್ರಧಾನ ಕಾರ್ಯದರ್ಶಿ ಶಿವಾಜಿ ನರಸಾನಿ, ಅಂಕೋಲಾ ರೈತಮೋರ್ಚಾ ಅಧ್ಯಕ್ಷ ಎಮ್. ಎನ್ .ಭಟ್ಟ, ಹಳಿಯಾಳ ರೈತಮೋರ್ಚಾ ಅಧ್ಯಕ್ಷ ಬಸಣ್ಣ ಕುರುಬನಕಟ್ಟಿ, ಶಿರಸಿ ತಾಲೂಕು ಕಾರ್ಯದರ್ಶಿ ಪುಟ್ಟರಾಜ ಸವಣೂರು, ರೈತಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಲಿಂಗಯ್ಯ ಅಲ್ಲಯ್ಯನವರಮಟ್, ಯುವ ಮುಖಂಡರಾದ ಶ್ರೀನಿವಾಸ ಘೋಟ್ನೇಕರ್ ಸೇರಿದಂತೆ ಅನೇಕ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು.
ಕಳೆದೊಂದು ವರ್ಷದಿಂದ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಳ್ಳ-ಮಳ್ಳರ ಸರಕಾರ ಕಿತ್ತೊಗೆಯಬೇಕು. ರಾಜ್ಯದಲ್ಲಿ ದಿನಕ್ಕೊಂದು ಹಗರಣ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕೂಡಲೇ ರಾಜೀನಾಮೆ ಕೊಡಲೇಬೇಕು.
ಅನಂತಮೂರ್ತಿ ಹೆಗಡೆ
ಜಿಲ್ಲಾ ಉಪಾಧ್ಯಕ್ಷರು, ರೈತಮೋರ್ಚಾ, ಉತ್ತರ ಕನ್ನಡ
0 Comments