Hot Posts

6/recent/ticker-posts

ಆಗಸ್ಟ 10 ರಂದು ಹೆಗಡೆಕಟ್ಟಾದಲ್ಲಿ “ಕೈ ಚಕ್ಕುಲಿ ಕಂಬಳ” ವಿವಿಧ ಸ್ಪರ್ಧೆ, ಪ್ರದರ್ಶನ ಆಯೋಜನೆ

ಶಿರಸಿ: ಸ್ಥಳೀಯ ಸಾಂಪ್ರದಾಯಿಕ ಪದ್ಧತಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಿರಸಿ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಆಗಸ್ಟ 10 ಮದ್ಯಾಹ್ನ 3.30 ಕ್ಕೆ ಸ್ಥಳೀಯ ಸಾರ್ವಜನಿಕರ ಸಹಕಾರ, ಸಹಯೋಗದೊಂದಿಗೆ ಕೈ ಚಕ್ಕುಲಿ ಕಂಬಳ ಆಯೋಜಿಸಲಾಗಿದೆ. ನಮ್ಮ ಸಂಪ್ರದಾಯಗಳು ನಶಿಸಿಹೋಗುತ್ತಿವೆ, ಗಣೇಶ ಚೌತಿ ಹತ್ತಿರ ಬಂತೆoದರೆ ಊರವರೆಲ್ಲ ಒಂದುಗೂಡಿ ಕೈಯಲ್ಲಿಯೇ ಚಕ್ಕುಲಿ ಸುತ್ತಿ ಹಬ್ಬವನ್ನು ಸಂಭ್ರಮದಿoದ ಆಚರಿಸುತ್ತಿದ್ದರು. ಕೈಯಲ್ಲಿ ಸುತ್ತಿದ ಚಕ್ಕುಲಿ ಕೇವಲ ರುಚಿ ಅಷ್ಟೇ ಅಲ್ಲ ಹೆಚ್ಚು ದಿನ ಇಟ್ಟುಕೊಂಡು ತಿನ್ನಲೂ ಸಾಧ್ಯವಿದೆ. ಈಗೀಗ ಕಡಿಮೆಯಾಗುತ್ತಿರುವ ಹೆಮ್ಮೆಯ ಸಂಪ್ರದಾಯ ಪ್ರೋತ್ಸಾಹಿಸುವ ಸಲುವಾಗಿ ಚಕ್ಕುಲಿ ಕಂಬಳ ಇದೇ ಪ್ರಥಮ ಬಾರಿಗೆ ಗ್ರಾಮೀಣ ಭಾಗದ ಹೆಗಡೆಕಟ್ಟಾ ಸೊಸೈಟಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ವಿವಿಧ ಸ್ಪರ್ಧೆ, ಕರಕುಶಲ, ಚಿತ್ರಕಲಾ ಪ್ರದರ್ಶನ ಆಯೋಜನೆ

ನವೀನ ಆಕರ್ಷಣೆಯಾಗಿ ಯಾವುದೇ ಭಾಗದ ಸಾರ್ವಜನಿಕರು, ಊರವರಿಗೆ ಕೈ ಚಕ್ಕುಲಿ ತಿನ್ನುವ, ಕೈ ಚಕ್ಕುಲಿ ಸುತ್ತುವ ಸ್ಪರ್ಧೆ ಆಯೋಜಿಸಲಾಗಿದ್ದು ಅಲ್ಟಾçಟೆಕ್ ಸಿಮೆಂಟ್ ವತಿಯಿಂದ ಆಕರ್ಷಕ ಬಹುಮಾನ ಇದೆ. ಅಮರ ಟೀ ಪ್ರೈವೇಟ್ ಲಿಮಿಟೆಡ್  ಅವರಿಂದ ದಿನಪೂರ್ತಿ ಉಚಿತ ಚಹಾ ವ್ಯವಸ್ಥೆಯಿದೆ. ಅಲ್ಲದೇ ಸ್ಥಳಿಯ ಮಹಿಳೆಯರ ಕರಕುಶಲತೆ ಆರತಿ ತಾಟು, ಮೊಗ್ಗಿನ ಜಡೆ, ಇನ್ನಿತರ ಕಲಾಪ್ರದರ್ಶನ ನಡೆಯಲಿದೆ. ಕು. ಹಿಮಾಂಕ ಹೆಗಡೆ, ಶಶಾಂಕ ನಾಯ್ಕ ಇನ್ನಿತರ ವಿದ್ಯಾರ್ಥಿಗಳ ಚಿತ್ರಕಲಾ ಪ್ರದರ್ಶನ ಕೂಡ ಇರಲಿದೆ. 

ವಿಶೇಷ ಆಕರ್ಷಣೆಯಾಗಿ ಅತಿ ದೊಡ್ಡ “ಕೈ ಚಕ್ಕುಲಿ” ಮತ್ತು “ತೇರಿನ ಆರತಿ”

ಗೋಳಿಕೊಪ್ಪದ ಶರ್ವಾಣಿ ಭಟ್ಟ ಅವರು ವಿವಿಧ ತರಕಾರಿ ಬೀಜ, ಪಿಸ್ತಾ ಸಿಪ್ಪೆಗಳಿಂದಲೇ ತಯಾರಿಸಿದ “ತೇರಿನ ಆರತಿ” ಪ್ರದರ್ಶನವಾಗಲಿದೆ. ಇಪ್ಪತ್ತಕ್ಕೂ ಹೆಚ್ಚು ಊರವರು ಆಗಮಿಸಿ ಕೈ ಚಕ್ಕುಲಿ ತಾಜಾ ಎಣ್ಣೆಯಿಂದ ಮಾಡಲಿದ್ದು, ಕೈಯಲ್ಲಿ ಸುತ್ತಿದ ಅತಿ ದೊಡ್ಡ ಚಕ್ಕುಲಿ ಪ್ರದರ್ಶನವಾಗಲಿದೆ. ಅಂದು ಕೈಯಲ್ಲಿ ಮಾಡಿದ ಚಕ್ಕುಲಿ ಮಾರಾಟ ಕೂಡ ಇದ್ದು ಅಲ್ಲಿಯೆ ತಿನ್ನಲು ಮತ್ತು ಖರೀದಿಸಿ ಒಯ್ಯಲು ಅವಕಾಶವಿದೆ. ಉತ್ತರಕನ್ನಡ ಸೇರಿದಂತೆ ಶಿರಸಿ ಸುತ್ತಲಿನ ಸಾರ್ವಜನಿಕರು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಲು ಸಂಘಟಕರಾದ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಅಧ್ಯಕ್ಷರು, ಆಡಳಿತ ಮಂಡಳಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಊರ ಸಾರ್ವಜನಿಕರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ಸ್ಪರ್ಧೆ ಮತ್ತು ಪ್ರದರ್ಶನಕ್ಕೆ ಹೆಸರು ನೋಂದಾಯಿಸಿಕೊಳ್ಳುವವರು 9972382333 ಮೊಬೈಲ ಸಂಖ್ಯೆಗೆ ಕರೆ ಮಾಡಬಹುದು.

ಪ್ರತಿಕ್ರಿಯೆ

Post a Comment

0 Comments