Hot Posts

6/recent/ticker-posts

ಕಳೆದ ವರ್ಷಕ್ಕೂ ಈ ವರ್ಷಕ್ಕೂ ಎಷ್ಟು ಮಳೆ ಹೆಚ್ಚಾಯ್ತು?

ಶಿರಸಿ: ಈ ಬಾರಿ ಇದುವರೆಗೆ ಉತ್ತಮ ಮಳೆಯಾಗುತ್ತಿದೆ ಅಂದ ಹಾಗೆ ಕಳೆದ ವರ್ಷಕ್ಕೂ ಈ ವರ್ಷಕ್ಕೂ ಹೋಲಿಕೆ ಮಾಡಿದಾಗ ಮಳೆ ಉತ್ತಮವಾಗಿಯೇ ಸುರಿಯುತ್ತಿದೆ. ಉತ್ತರ ಕನ್ನಡದ ಕೆಲವು ಭಾಗಗಳ ಮಳೆಯ ಅವಲೋಕನವನ್ನು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ 

ಶಿರಸಿ ತಾಲೂಕಿನಲ್ಲಿ 258.9 ಮಿ.ಮೀ ಮಳೆಯಾಗಿತ್ತು ಪ್ರಸಕ್ತ ವರ್ಷ 977.5 ಮಿ.ಮೀ. ಮಳೆಯಾಗಿದೆ. ಅಂದರೆ ನಾಲ್ಕು ಪಟ್ಟು ಹೆಚ್ಚು ಮಳೆಯಾಗಿದೆ ಎಂದು ಹೇಳಬಹುದು. ಇನ್ನು ಸಿದ್ದಾಪುರ ತಾಲೂಕಿನಲ್ಲಿ 251.2 ಮಿ.ಮೀ. ಮಳೆಯಾಗಿತ್ತು ಈ ಬಾರಿ 1078 ಮಳೆಯಾಗಿದೆ. ಮುಂಡಗೋಡು ತಾಲೂಕಿನಲ್ಲಿಯೂ ಹಾಗೆ ಮುಂಡಗೋಡ ತಾಲೂಕಿನಲ್ಲಿ 163.2 ಮಿ.ಮೀ. ಮಳೆಯಾಗಿತ್ತು. ಈ ವರ್ಷ 381 ಮಿ.ಮೀ. ಮಳೆಯಾಗಿದೆ. ಸುಧಾಪುರ ಕ್ಷೇತ್ರದಲ್ಲಿ ಮತ್ತು ಮುಂಡಿಗೆಕೆರೆ ಪಕ್ಷಿಧಾಮದ ಸರಹದ್ದಿನಲ್ಲಿ ಜು. 5 ಬೆಳಗಿನ 8.30ರವರೆಗೆ ಕಳೆದ 24 ಗಂಟೆಯಲ್ಲಿ 103.4 ಮಿ.ಮೀ ಮಳೆಯಾಗಿದೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಉತ್ತರ ಕನ್ನಡದ ಎಲ್ಲಾ ಭಾಗಗಳಲ್ಲಿಯೂ ಉತ್ತಮ ಮಳೆ ಸುರಿಯುತ್ತಿದೆ. 

ಪ್ರತಿಕ್ರಿಯೆ

Post a Comment

0 Comments