Hot Posts

6/recent/ticker-posts

ಹುಳಗೋಳದಲ್ಲಿ ಪೌರಾಣಿಕ ಯಕ್ಷಗಾನ ಪ್ರದರ್ಶನ ನಾಳೆ

ಶಿರಸಿ: ತಾಲೂಕಿನ ಭೈರುಂಬೆ ಶಾರದಾಂಬಾ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಭೈರುಂಬೆ ಗೆಳೆಯರ ಬಳಗ ಮತ್ತು ಪಾಟಕ್ ಯಕ್ಷ ಸಂಸ್ಕೃತಿ ಟ್ರಸ್ಟ್ ಬೆಂಗಳೂರು ಆಶ್ರಯದಲ್ಲಿ ಪಟ್ಟಣದ ಹುಳಗೋಳ ಸಹಕಾರಿ ಸಂಘದ ಆವರಣದಲ್ಲಿ ಜೂ. 8ರಂದು ಸಂಜೆ 5 ಗಂಟೆಗೆ ಭೀಷ್ಮಪರ್ವ' ಹಾಗೂ 'ಬಬ್ರುವಾಹನ ಕಾಳಗ' ಎಂಬ ಯಕ್ಷಗಾನ ಉಚಿತ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. 
ರಾಘವೇಂದ್ರ ಆಚಾರ್ಯ ಜನ್ಸಾಲೆ. ಶ್ರೀರಕ್ಷಾ ಹೆಗಡೆ ಸಿದ್ದಾಪುರ, ಮೇಘಾ ಎಸ್. ಭಟ್ಟ ಅವರ ಭಾಗವತಿಕೆ ಇರಲಿದ್ದು, ಮದ್ದಳೆ ಎ.ಪಿ. ಪಾಟಕ್ ಕಾರ್ಕಳ, ಚಂಡೆ ಪ್ರಸನ್ನ ಹೆಗ್ಗಾರ ನುಡಿಸಲಿದ್ದಾರೆ. ಪಾತ್ರಧಾರಿಗಳಾಗಿ ಕೆ.ಜಿ. ಮಂಜುನಾಥ, ಶ್ರೀಧರ ಹೆಗಡೆ ಚಪ್ಪರಮನೆ, ಸಂಜಯ ಬೆಳೆಯೂರು, ಸದಾಶಿವ ಭಟ್ಟ ಮಲವಳ್ಳಿ, ಈಶ್ವರ ನಾಯಕ ಮಂಕಿ, ಅಶ್ವಿನಿ ಕೊಂಡದಕುಳಿ, ನಾಗೇಶ ಕುಳಿಮನೆ, ಪವನಕುಮಾರ ಸಾಣ್ಮನೆ, ದೀಪಕ ಕುಂಕಿ, ಮಾನ್ಯ ಎಂ. ಹೆಗಡೆ, ಅಭಿಜ್ಞಾ ಹೆಗಡೆ ಭಾಗವಹಿಸಲಿದ್ದಾರೆ. ಬಬ್ರುವಾಹನ ಕಾಳಗ ಯಕ್ಷಗಾನದಲ್ಲಿ ರಾಮಕೃಷ್ಣ ಹೆಗಡೆ, ಹಿಲ್ಲೂರು ಇವರ ಭಾಗವತಿಕೆ ಇರಲಿದ್ದು, ಮದ್ದಳೆ ಅನಿರುದ್ಧ ವರ್ಗಾಸರ, ಚಂಡೆ ಗಣೇಶ ಗಾಂತ್ಕರ್, ಹಳವಳ್ಳಿ ನುಡಿಸಲಿದ್ದಾರೆ. ಪಾತ್ರಧಾರಿಗಳಾಗಿ ಸುಬ್ರಹ್ಮಣ್ಯ ಚಿಟ್ಟಾಣಿ, ಶ್ರೀಧರ ಹೆಗಡೆ ಚಪ್ಪರಮನೆ, ಅಜಿತ ಕಾರಂತ, ವಿಶ್ವನಾಥ ಹೆನ್ನಾಬೈಲು, ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ಸದಾಶಿವ ಭಟ್ಟ ಮಲವಳ್ಳಿ, ಈಶ್ವರ ನಾಯಕ ಮಂಕಿ, ಇತರರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪ್ರತಿಕ್ರಿಯೆ

Post a Comment

0 Comments