Hot Posts

6/recent/ticker-posts

೧೭ಕ್ಕೆ ಶಿರಸೀಲಿ ಹೇಳದೇ ಉಳಿದ ಕಥೆಗಳು

ಶಿರಸಿ: ವಿಶ್ವಶಾಂತಿ ಸೇವಾ ಟ್ರಸ್ಟ್ ಎಂಇಎಸ್ ಕಲಾ ಮತ್ತು ವಿಜ್ಞಾನ ಮಹಾ ವಿದ್ಯಾಲಯವು ಕಾಲೇಜಿನ ಇತಿಹಾಸ ಹಾಗೂ ‌ಪತ್ರಿಕೋದ್ಯಮ ವಿಭಾಗದ ಸಹಕಾರದಲ್ಲಿ ಕರಿ‌ಮೆಣಸಿನ ರಾಣಿ ಚೆನ್ನಭೈರಾದೇವಿ ಕಾದಂಬರಿಯಲ್ಲಿ 'ಹೇಳದೇ ಉಳಿದ ಕಥೆಗಳು' ಎಂಬ ವಿಶಿಷ್ಟ ಕಾರ್ಯಕ್ರಮ ಮೇ‌೧೭ರ ಬೆಳಿಗ್ಗೆ ೧೦:೪೫ಕ್ಕೆ ಕಾಲೇಜಿನ ಮೋಟಿನ್ಸರ ಸ್ಮಾರಕ ಸಭಾಂಗಣದಲ್ಲಿ ಹಮ್ಮಿಕೊಂಡಿದೆ.

ಚೆನ್ನಭೈರಾದೇವಿಯ ಸಾಹಸ ಕಥೆಯ ಮೆಲುಕನ್ನು ಪ್ರಸಿದ್ಧ ಕಾದಂಬರಿಕಾರ ಗಜಾನನ ಶರ್ಮಾ ಅವರು ಮಾಡಲಿದ್ದಾರೆ. ಅತಿಥಿಗಳಾಗಿ ಪ್ರಜಾವಾಣಿ‌ ದೈನಿಕದ ಕಾರ್ಯನಿರ್ವಾಹಕ‌ ಸಂಪಾದಕ ರವೀಂದ್ರ ಭಟ್ಟ, ಸೆಲ್ಕೋ ಇಂಡಿಯಾದ ಸಿಇಓ, ಅರ್ಥದಾರಿ ಮೋಹನ ಭಾಸ್ಕರ ಹೆಗಡೆ ಹೆರವಟ್ಟ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಕಾಲೇಜು ಉಪ ಸಮಿತಿ ಅಧ್ಯಕ್ಷ ಎಸ್.ಕೆ.ಭಾಗ್ವತ್ ವಹಿಸಿಕೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಪ್ರತಿಕ್ರಿಯೆ

Post a Comment

0 Comments