Hot Posts

6/recent/ticker-posts

ಶಿರಸಿ ಮಾರಿಕಾಂಬೆಯ ಜಾತ್ರಾ ಮಹೋತ್ಸವ ಶುರು: ಮಾಹಿತಿಗೆ ವೆಬ್ಸೈಟ್ ಬಿಡುಗಡೆ

ಶಿರಸಿ: ರಾಜ್ಯದಲ್ಲಿಯೇ ಸುಪ್ರಸಿದ್ಧ ಜಾತ್ರೆ ಎರಡು ವರ್ಷಗಳಿಗೊಮ್ಮೆ ನಡೆಯುವ ಶಿರಸಿಯ ಶ್ರೀ ಮಾರಿಕಾಂಬಾ ಜಾತ್ರೆಗೆ ಕ್ಷಣಗಣನೆ ಆರಂಭವಾಗಿಡೆ. ಮಾರ್ಚ್ 19ರಿಂದ ಮಾರ್ಚ್ 27ರವರೆಗೆ ಮಹೋತ್ಸವ  ಜರುಗಲಿದೆ. ಶ್ರೀದೇವಿಯ ಭಕ್ತರು ಗದ್ದುಗೆಯಲ್ಲಿ ದೇವಿಯ ದರ್ಶನಕ್ಕೆ ಹಾಗೂ ಪೂಜೆ ಹರಕೆ ಸಲ್ಲಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಮಾರ್ಚ್ 19ರಿಂದ ಜಾತ್ರೆ ಆರಂಭಗೊಂಡರು ಮಂಗಳವಾರ 20ರ ಮಧ್ಯಾಹ್ನ 12.27 ರಿಂದ 12.36 ಒಳಗಿನ ಶುಭಮುಹೂರ್ತದಲ್ಲಿ ರಥದ ಕಲಶ ಪ್ರತಿಷ್ಠೆ ನಡೆಯಲಿದೆ. ಬಿಡ ಕಿ ಬೈಲಿನ ಜಾತ್ರಾ ಗದ್ದುಗೆಯಲ್ಲಿ ದೇವಿಯ ದರ್ಶನಕ್ಕೆ ಸಾಗಲು ಭಕ್ತರಿಗೆ ಸರತಿ ಸಾಲಿಗಾಗಿ ಕಬ್ಬಿಣದ ಗ್ರಿಲ್‌ಗಳು, ಹಣ್ಣು ಕಾಯಿ ಸೇವೆಗಾಗಿ ವಿಶಾಲ ಜಾಗದಲ್ಲಿ ಕಾಯಿ ಒಡೆಯುವ ಸೌಲಭ್ಯ, ಉಡಿ, ಸೀರೆ ಸೇವೆ ಹಾಗೂ ಇತರ ಸೇವೆಗಳ ಪಾವತಿ ಮತ್ತು ಸುವಸ್ತುಗಳ ಪೂರೈಕೆಗಾಗಿ ಸೇವಾ ಕೌಂಟರ್‌ಗಳು, ಜಾತ್ರಾ ಮಂಟಪದಲ್ಲಿ ವ್ಯವಸ್ಥೆ ಇರಲಿದೆ. ಈಗಾಗಲೇ ವಿವಿಧ ಊರುಗಳಿಂದ ಬಂದ ವ್ಯಾಪಾರಸ್ಥರು ತಮ್ಮ ತಮ್ಮ ಅಂಗಡಿಗಳನ್ನು ತೆರೆದುಕೊಂಡಿದ್ದು ಮಾಯಾ ಲೋಕವೇ ಶಿರಸಿಯಲ್ಲಿ ಸೃಷ್ಟಿಯಾಗಲಿದೆ.

ಜಾತ್ರೆಯ ಮಾಹಿತಿಗೆ ಪೊಲೀಸ್ ಇಲಾಖೆಯಿಂದ ವೆಬ್ಸೈಟ್

ಜಾತ್ರೆಗೆ ಬರುವ ಭಕ್ತಾದಿಗಳಿಗೆ ಜಾತ್ರೆಯ ಮಾಹಿತಿ ಹಾಗೂ ರಸ್ತೆ ಸಂಚಾರ ಮತ್ತು ವಾಹನ ನಿಲುಗಡೆ ಪ್ರದೇಶಗಳ ಬಗ್ಗೆ ವಿವರ ಮಾಹಿತಿಯೊಂದಿಗೆ www.sirsipolice.in ವೆಬ್‌ಸೈಟ್‌ ಕಾರ್ಯನಿರ್ವಹಿಸಲಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಇದನ್ನು ಬಿಡುಗಡೆ ಮಾಡಲಾಗಿದೆ. ವಾಹನ ನಿಲುಗಡೆ ಲಭ್ಯವಿರುವ ಸ್ಥಾನಗಳ ಬಗ್ಗೆ ವಾಸ್ತವಿಕ ಮಾಹಿತಿ ಇದು ನೀಡಲಿದೆ. ಖಾಸಗಿ ಬಸ್‌ಗಳಿಗೆ ಪೊಲೀಸ್ ಗೌಂಡ್ (ಹುಬ್ಬಳ್ಳಿ ರಸ್ತೆ-ಶಿರಸಿ) ವ್ಯವಸ್ಥೆ ಮಾಡಲಾಗಿದೆ. ಶಿವಾಜಿ ಚೌಕ (ರಾಯರ ಪೇಟೆ ರಸ್ತೆಯ ಬಲಬಾಗ), ಐದು ರಸ್ತೆ (ಲಕ್ಷ್ಮಿಟಾಕೀಸ್ ಪಕೃ), ಹೊಸ ಬಸ್ ನಿಲ್ದಾಣ, ಉಡುಪಿ ಹೊಟೆಲ್ ಹಿಂಭಾಗ (ಟೆಲಿಫೋನ್ ಕಛೇರಿ ಹತ್ತಿರ), ಕಾಮತ್ ಹೊಟೆಲ್ ಕೆಳಭಾಗ ಎಡಕ್ಕೆ ಹುಬ್ಬಳ್ಳಿ ರಸ್ತೆ ಮೋಚಿಗಲ್ಲಿವರೆಗೆ, ಕೊಟೆಕೆರೆ ಕ್ರಾಸ್ ಕರಿಗುಂಡಿ ರಸ್ತೆ, ಬಾರಕೂರ ಚೌಕ/ಸಿಪಿ ಬಜಾರ್, ದೇವಿಕೆರೆ (ಅಶ್ವತ್ಥ ಕಟ್ಟೆ ಹತ್ತಿರ), ರಾಮನಬೈಲ್ ಬನವಾಸಿ ರಸ್ತೆ, ಜಗದಂಬಾ ವೃತ್ತ (ಗಾರ್ಡನ್ ಒಳಗೆ) ಆಟೋಗಳ ನಿಲ್ದಾಣಕ್ಕೆ ಅವಕಾಶ ನೀಡಲಾಗಿದೆ. ಕೋಟೆಕೆರೆ ಕ್ರಾಸ್, ಝೂ ವೃತ್ತ ರಾಮನಬೈಲ್ (ಬನವಾಸಿ ರಸ್ತೆ) ಟೆಂಪೋ ನಿಲ್ದಾಣ ಮತ್ತು ವ್ಯಾಯಾಮ ಶಾಲೆ (ಪಿಕಪ್ ಪಾಯಿಂಟ್), ರಾಯಪ್ಪ ಹುಲೇಕಲ್ ಶಾಲೆ (ಡ್ರಾಪಿಂಗ್ ಪಾಯಿಂಟ್), ಹೊಸ ಬಸ್ ನಿಲ್ದಾಣದಲ್ಲಿ ಸಾರಿಗೆ ಸಂಸ್ಥೆಯ ಬಸ್‌ಗಳು ನಿಲುಗಡೆಯಾಗಲಿದೆ. 

ಜಾತ್ರೆಗೆ ಹೈ ಸೆಕ್ಯೂರಿಟಿ

ಜಾತ್ರೆ ನಡೆಯುವ ಪ್ರಮುಖ ಸ್ಥಳಗಳು ಜಾತ್ರಾಗದ್ದುಗೆ, ರಥೋತ್ಸವ ಸಂದರ್ಭದಲ್ಲಿ ಮಹಿಳೆಯರ ರಕ್ಷಣೆಗಾಗಿ ಓಬವ್ವ ಮತ್ತು ಕಮಾಂಡೋ ಪಡೆ ಇದೆ ಓಬವ್ವ ಪಡೆಯಲ್ಲಿ 20 ಮಹಿಳಾ ಸಿಬ್ಬಂದಿಗಳು ಮತ್ತು ಕಮಾಂಡೋ ಪಡೆಯಲ್ಲಿ 20 ಪುರುಷ ಸಿಬ್ಬಂದಿಗಳಿರಲಿದ್ದಾರೆ. 10 ಪುರುಷ ಪೊಲೀಸ್ ತಂಡದ ಆಂಟಿ ಡೆಮೊಸ್ಟೇಷನ್ ಸಡ್, ಜನಸಂದಣಿ ಪ್ರದೇಶದಲ್ಲಿ ಹಿರಿಯ ನಾಗರಿಕರ ಸಹಾಯ ರಕ್ಷಣೆಗಾಗಿ ಸಿನಿಯರ್ ಸಿಟಿಜನ್ ರೆಸ್ಕೊ ಟೀಮ್, ಜನಸಂದಣಿ ಪ್ರದೇಶದಲ್ಲಿ ಮಕ್ಕಳ ಮತ್ತು ಮಹಿಳೆಯರ ರಕ್ಷಣೆಗಾಗಿ 12 ಜನ ವಿಶೇಷ ನುರಿತ ಪೊಲೀಸ್ ಸಿಬ್ಬಂದಿ ತಂಡದ ಚಿಲ್ಡನ್ ಮತ್ತು ವುಮೆನ್ಸ್ ರೆಸ್ಕೊ ಟೀಮ್, 12 ಜನ ವಿಶೇಷ ಪೊಲೀಸರ ತಂಡವು ಮೆಡಿಕಲ್ ಎಮರ್ಜನ್ಸಿ ಅಸಿಸ್ಟನ್ಸ್ ಟೀಮ್, ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಲು ಪೊಲೀಸ್ ತಂಡ ಕೆಲಸ ನಿರ್ವಹಿಸಲಿದೆ. ಜನಸಂದಣಿ ಪ್ರದೇಶಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದ್ದು ನುರಿತ ತಂಡ ನಿಗಾ ವಹಿಸಲು ಸಿಸಿ ಟಿವಿ ಮೊನಿಟ್ರಿಂಗ್ ಟೀಮ್, ಲೈಫ್‌ಗಾರ್ಡ್ ಟೀಮ್, 8 ನುರಿತ ಸಿಬ್ಬಂದಿಗಳ ತಂಡವು ಟ್ರಾಫಿಕ್ ನಿಯಂತ್ರಣ ಮಾಡಲಾಗಿದೆ. ಅಪರಾಧ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಸ್ಥಸೆ. ಟೀಮ್, ಅಪರಾಧ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಕ್ರಮ ಕೈಗೊಳ್ಳಲಾಗಿದೆ.

ಪ್ರತಿಕ್ರಿಯೆ

Post a Comment

0 Comments