Hot Posts

6/recent/ticker-posts

ಲಯನ್ಸ ಪಿ.ಯು ಕಾಲೇಜಿಗೆ ಶೇ. 100 ಫಲಿತಾಂಶ:

ಶಿರಸಿ: 2023-24 ನೇ ಸಾಲಿನಿಂದ ನೂತನವಾಗಿ ಆರಂಭವಾದ ಅತ್ಯಂತ ವಿಶೇಷ ರೀತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಿತ ಶಿರಸಿಯ ಡಾ. ಭಾಸ್ಕರ ಸ್ವಾದಿ ಮೆಮೋರಿಯಲ್ ಲಯನ್ಸ ಪಿ.ಯು. ಕಾಲೇಜು ಇಂದು ಪ್ರಕಟವಾದ ಪ್ರಥಮ ಪಿ.ಯು. ಬೋರ್ಡ ಪರೀಕ್ಷಾ ಫಲಿತಾಂಶದಲ್ಲಿ ಶೇ.100 ರ ಸಾಧನೆ ಗೈದಿದೆ. ಪರೀಕ್ಷೆಗೆ ಕುಳಿತ ಎಲ್ಲಾ ವಿದ್ಯಾರ್ಥಿಗಳು ಶೇ. 70ಕ್ಕಿಂತ ಹೆಚ್ಚು ಅಂಕ ಪಡೆದು ತೇರ್ಗಡೆಯಾಗುವದರೊಂದಿಗೆ ವಿಶಿಷ್ಟ ದಾಖಲೆ ಮೆರೆದಿದ್ದಾರೆ.

ಪ್ರಥಮ ಪಿ.ಯು ವಿಜ್ಞಾನ ವಿಭಾಗದಲ್ಲಿ ಕು. ಚಿನ್ಮಯ ಶಾಂತಾರಾಮ ಭಟ್ ಶೇ. 97 ಅಂಕದೊoದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದರೆ. ಕು. ಅಯನಾ ವಾಯ್. ಶೇ. 94 ಅಂಕದೊoದಿಗೆ ದ್ವಿತೀಯ ಸ್ಥಾನ ಹಾಗೂ ಕು.ಚಿನ್ಮಯೀ ಶೆ 93 ಅಂಕದೊoದಿಗೆ ತೃತೀಯ ಸ್ಥಾನ ಪಡೆದಿದ್ದಾರೆ. 

ಸಾಧನೆಗೈದ ವಿದ್ಯಾರ್ಥಿಗಳಿಗೆ ಇವರ ಸಾಧನೆಗೆ ಬೆನ್ನೆಲುಬಾಗಿ ನಿಂತ ಪಾಲಕರಿಗೆ, ಶಿರಸಿ ಲಯನ್ಸ ಎಜುಕೇಷನ್ ಸೊಸೈಟಿಯ ಅಧ್ಯಕ್ಷರು ಹಾಗೂ ಸದಸ್ಯರು, ಬೇಸ್ ಎಜುಕೆಷನ್ ಬೆಂಗಳೂರಿನ ತಂಡ, ಲಯನ್ ಸಮೂಹ ಶಾಲೆ ಹಾಗೂ ಕಾಲೇಜಿನ ಪ್ರಾಚಾರ್ಯ, ಬೋಧಕ -ಬೋಧಕೇತರ ವೃಂದ, ಶಿರಸಿ ಲಯನ್ಸ್ ಕ್ಲಬ್ ಬಳಗ ಅಭಿವಂದಿಸಿ, ಶುಭ ಹಾರೈಸಿರುತ್ತಾರೆ.

2024- 25ನೇ ಸಾಲಿನ ಪ್ರಥಮ ಪಿ.ಯು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ಪ್ರವೇಶ ಪ್ರಕ್ರಿಯೆ ನಡೆದಿದ್ದು, ಆಸಕ್ತ ಪಾಲಕರು ತಮ್ಮ ಮಕ್ಕಳನ್ನು ಸೇರಿಸ ಬಹುದಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಸ್ಫರ್ದಾತ್ಮಕ ಪರೀಕ್ಷಾ ತರಬೇತಿ ಕೇಂದ್ರಿತ ಕಾಲೇಜು ಶಿರಸಿ ಲಯನ್ಸ ಅಕಾಡೆಮಿ ಹಾಗೂ ಬೇಸ್ ಎದುಕೇಷನ್ ಬೆಂಗಳೂರು ಇವರ ಸಹಯೋಗದಲ್ಲಿ ನಡೆಯುತ್ತಿದೆ. ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗಾಗಿ ದೂರದೂರಿಗೆ ಮಕ್ಕಳನ್ನು ಬಿಡಬೇಕಾದ ಅನಿವಾರ್ಯತೆಯಿರುವ ಶಿರಸಿಯ ಪಾಲಕರ ಬಹುದೊಡ್ಡ ಕೊರತೆಯನ್ನು ಲಯನ್ಸ ಎಜುಕೆಷನ್ ಸೊಸೈಟಿ ನೀಗಿಸಿದೆ. ಆಸಕ್ತರು ಕೂಡಲೆ ಕಾಯಾಲಯವನ್ನು ಸಂಪರ್ಕಿಸಲು ಕೋರಿದೆ.

ಪ್ರತಿಕ್ರಿಯೆ

Post a Comment

0 Comments