Hot Posts

6/recent/ticker-posts

ಮಾ.23ರಂದು ‘ಗೊದ್ಲಬೀಳ-ಹೀನಗಾರ ಉತ್ಸವ-2024’

            
ಸಿದ್ದಾಪುರ: ತಾಲೂಕಿನ ಯಕ್ಷ ಅಭಿಮಾನಿ ಬಳಗ ಗೊದ್ಲಬೀಳ-ಹೀನಗಾರ ಇವರ ಸಂಯೋಜನೆಯಲ್ಲಿ ‘ಗೊದ್ಲಬೀಳ-ಹೀನಗಾರ ಉತ್ಸವ-2024’ ಮಾ.23, ಶನಿವಾರದಂದು ಹೀನಗಾರ ಶಾಲಾ ಹತ್ತಿರದ ಮೈದಾನದಲ್ಲಿ ಜರುಗಲಿದೆ.

ಸಂಜೆ 6.30ರಿಂದ ಚಿಣ್ಣರ ಚಿಲಿ-ಪಿಲಿ ಮಕ್ಕಳ ಮನೋರಂಜನಾ ಕಾರ್ಯಕ್ರಮ, ಕು.ಸ್ನೇಹಶ್ರೀ ಹೆಗಡೆ ಶಿರಸಿ ಇವಳಿಂದ ಡ್ಯಾನ್ಸ್, ರಾತ್ರಿ 8ರಿಂದ ಗಣ್ಯರ ಉಪಸ್ಥಿತಿಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸವ್ಯಸಾಚಿ ಯಕ್ಷಗಾನ ಕಲಾವಿದ ಅಶೋಕ ಭಟ್ಟ ಸಿದ್ದಾಪುರ ಇವರಿಗೆ ಗೌರವ ಸಮರ್ಪಣೆ ನಡೆಯಲಿದೆ. ನಂತರ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀಕ್ಷೇತ್ರ ಮೆಕ್ಕೆಕಟ್ಟು ಮೇಳ ಹಾಗೂ ಅತಿಥಿ ಕಲಾವಿದರಿಂದ ಭೂಕೈಲಾಸ ಹಾಗೂ ಬರ್ಭರಿಕ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ಅತಿಥಿ ಕಲಾವಿದರಾಗಿ ಅಶೋಕ ಭಟ್ಟ ಸಿದ್ದಾಪುರ ಹಾಗೂ ನಿಹಾರಿಕ ಭಟ್ಟ ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ಪ್ರತಿಕ್ರಿಯೆ

Post a Comment

0 Comments