Hot Posts

6/recent/ticker-posts

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ ಷಡ್ಯಂತ್ರ ಅನಂತ ಮೂರ್ತಿ ಹೆಗಡೆ ಖಂಡನೆ

ಶಿರಸಿ: ಅವ್ವ ಎನ್ನದೇ ಯಾರನ್ನೂ ಮಾತನಾಡಿಸದ ಮಗ, ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಭಾಗ್ಯಲಕ್ಷ್ಮಿ ಯೋಜನೆ ತಂದ ಯಜಮಾನ, ಲಕ್ಷಾಂತರ ಮಕ್ಕಳಿಗೆ ಸೈಕಲ್ ಕೊಟ್ಟು ಶಾಲೆಗೆ ಕಳುಹಿಸಿದ ಗುರು, ಕರುನಾಡಿನ ಧೀರ್ಘಾವಧಿಯ ಮುಖ್ಯಮಂತ್ರಿಯಾಗಿ ಸೇವೆ ನೀಡಿದವ, ಸರ್ವಸ್ವವನ್ನು ತ್ಯಜಿಸಿ ಜನರಿಗಾಗಿ ಜೀವನ ಅರ್ಪಿಸಿದವನನ್ನು ಈ ರೀತಿ ನಡೆಸಿಕೊಳ್ಳುವುದೇ ನಮ್ಮ ಸಮಾಜ ಎಂದು ಬಿಜೆಪಿ ರೈತ ಮೋರ್ಚ ಉಪಾಧ್ಯಕ್ಷ ಅನಂತ ಮೂರ್ತಿ ಹೆಗಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಅಂದು ಸ್ವಚ್ಛ ಮನಸ್ಸಿನಿಂದಲೇ ಈ ಕನ್ನಡ ನಾಡಿನ ಕಲ್ಯಾಣಕ್ಕಾಗಿ, ರೈತರ ಉದ್ದಾರಕ್ಕಾಗಿ, ನಾಡಿನ ಮಕ್ಕಳ ಭವಿಷ್ಯಕ್ಕಾಗಿ ಮುಖ್ಯಮಂತ್ರಿಯಾಗಿ ದುಡಿದು ಜನಸೇವೆ ಮಾಡುತ್ತಿರುವಾಗ ಅಕೌಂಟಿಗೆ ಹಣ ಹಾಕಿ, ಭ್ರಾಷ್ಟಾಚಾರದ ಆರೋಪ ಹೊರಿಸಿ, ಒಬ್ಬ ಜನ ಸೇವಕನನ್ನು ಜೈಲಿಗಟ್ಟಿದರು, ಆ ಜೈಲಿನ ಗೋಡೆಗಳ ಹಿಂದೆಯೂ ಆತ ಈ ನಾಡಿಗಾಗಿ ಮರುಗುವುದನ್ನು ಬಿಡಲಿಲ್ಲ. ಇಂದು ಇಳಿ ವಯಸ್ಸಿನಲ್ಲಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆದು, ಸಂಘಟನೆಯ ಕಾರ್ಯ ಮಾಡುತ್ತಾ ಸಾಗುತ್ತಿರುವ ನಮ್ಮ 82 ಪ್ರಾಯದ ಯಡಿಯೂರಪ್ಪರ ಮೇಲೆ ಪೋಸ್ಕೋ ಕೇಸ್ ದಾಖಲಿಸುವುದು ಎಂದಾದರೆ ? ಛೀ, ಧಿಕ್ಕಾರವಿದೆ ಎಂದು ಅನಂತಮೂರ್ತಿ ಹೆಗಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

 ಸಣ್ಣ ಪುಟ್ಟ ಸಾಧನೆ ಮಾಡುವವನೂ ತನ್ನ ಇಡೀ ಜೀವನವನ್ನೇ ವ್ಯಯಿಸಿ ತಾನಂದುಕೊಂಡದ್ದನ್ನು ಸಾಧಿಸಲು ಹೆಣಗುತ್ತಾನೆ. ಅಂತದ್ದರಲ್ಲಿ ಜನರಿಗಾಗಿ, ನಾಡಿಗಾಗಿ, ವಿಚಾರ ವ್ಯವಸ್ಥೆಗಾಗಿ ತನ್ನನ್ನು ತಾನು ಸವೆಸಿ, ಬೆನ್ನು ಬಾಗಿ ನಡೆದಾಡುವ ವ್ಯಕ್ತಿಯ ಮೇಲೆ ಲೈಂಗಿಕ ದೌರ್ಜನ್ಯದ ಆರೋಪವೇ ಎಂದಿದ್ದಾರೆ.

 ತಮ್ಮ ತಮ್ಮ ದುರಾಸೆಗಳಿಗಾಗಿ ಹತ್ತಾರು ಜನರ ಮೇಲೆ ಕೇಸ್ ಹಾಕಿ ತಿರುಗುವ ಹೆಮ್ಮಾರಿಯರು, ಒಬ್ಬ ಜನಸೇವಕ ದಶಕಗಳ ಕಾಲ ಜನರಿಗಾಗಿ ದುಡಿದು ಸಾಧಿಸಿದ ಹೆಸರು ಕೀರ್ತಿಯನ್ನು ಇಂತಹ ಒಂದು ಸಣ್ಣ ತುಚ್ಯ ಆರೋಪದಿಂದ ಹಾಳುಗೆಡುವುದಾದರೆ ? ಇದು ಸಹಿಸಲಾಗದು. ಕಾಣದ ಕೈಗಳು ಒಬ್ಬ ಮಹಾನಾಯಕನ ತೇಜೋವಧೆ ಮಾಡುವುದನ್ನು ಕಂಡು ಕಾಣದಂತೆ ಕೂತರೆ ಭಗವಂತ ನಮ್ಮ ಬದುಕನ್ನೂ ಮೆಚ್ಚುವುದಿಲ್ಲ. ಈ ಷಡ್ಯಂತ್ರವನ್ನು ನಾನು ಖಂಡಿಸುತ್ತೇನೆ. ಸಕಲರೊಂದಿಗೆ ಗೌರವದಿಂದ ನಡೆದುಕೊಳ್ಳುವ, ತಾನು ಒಬ್ಬ ಹೆಣ್ಣು ಮಕ್ಕಳ ತಂದೆಯಾಗಿರುವ ಯಡಿಯೂರಪ್ಪರಿಂದ ಈ ರೀತಿಯ ಘಟನೆ ಜರುಗಲು ಸಾಧ್ಯವಿಲ್ಲ ಎಂಬ ಬಲವಾದ ನಂಬಿಕೆ ನಮ್ಮದು. ಅವರನ್ನು ಇಕ್ಕಟ್ಟಿಗೆ ಸಿಲುಕಿಸಿ ಅವರ ಚರಿತ್ರೆ ಹರಣ ಮಾಡಲು ಯಾರೇ ಪ್ರಯತ್ನಿಸಿದರೂ ಅದೊಂದು ಅಕ್ಷಮ್ಯ ಅಪರಾಧ. ಯಡಿಯೂರಪ್ಪರ ಜೊತೆ ನಾನಿದ್ದೇನೆ ಎಂದಿದ್ದಾರೆ.

ಪ್ರತಿಕ್ರಿಯೆ

Post a Comment

0 Comments