Hot Posts

6/recent/ticker-posts

ಏಪ್ರಿಲ್ 11 ರಂದು ಶಿರಸಿ ರಂಗಧಾಮದಲ್ಲಿ ಯಕ್ಷಕಲಾ ಸಂಗಮ ವಾರ್ಷಿಕೋತ್ಸವ:

        

ಶಿರಸಿ: ಏಪ್ರಿಲ್ 11 ಮಧ್ಯಾಹ್ನ 3:30 ಗಂಟೆಗೆ ಶಿರಸಿಯ ನೆಮ್ಮದಿಯ ರಂಗಧಾಮದಲ್ಲಿ ಯಕ್ಷಕಲಾ ಸಂಗಮ ಇದರ ವಾರ್ಷಿಕೋತ್ಸವ ಕೆಡಿಸಿಸಿ ಬ್ಯಾಂಕ್ ಸಹಕಾರದೊಂದಿಗೆ ನಡೆಯಲಿದೆ. ಅಧ್ಯಕ್ಷರಾಗಿ ಡಾ|| ಜಿ. ಎಲ್. ಹೆಗಡೆ ಮಾರ್ಗದರ್ಶಕರು ಯಕ್ಷಕಲಾಸಂಗಮ ಶಿರಸಿ(ರಿ.) ಉದ್ಘಾಟಕರಾಗಿ ಡಾ|| ವಿದ್ವಾನ್ ವಿನಾಯಕ ಭಟ್ಟ ಗಾಳಿಮನೆ ಮಾರ್ಗದರ್ಶಕರು, ಯಕ್ಷಕಲಾಸಂಗಮ (ರಿ.) ಅತಿಥಿಗಳಾಗಿ ಶ್ರೀಮತಿ ಜಯಶ್ರೀ ಹೆಗಡೆ ಕೊಡೆಮನೆ ಯಕ್ಷಗಾನ ಕಲಾವಿದೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಯಕ್ಷಸನ್ಮಾನ ಕಾರ್ಯಕ್ರಮ ನಡೆಯಲಿದ್ದು ಗಜಾನನ ಭಟ್ಟ ತುಳಗೇರಿ ದಂಪತಿಗಳನ್ನು ಸನ್ಮಾನಿಸಲಾಗುತ್ತದೆ.

ನಂತರ ಸಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು ಯಕ್ಷಕಲಾಸಂಗಮದ ವಿದ್ಯಾರ್ಥಿಗಳಿಂದ ಯಕ್ಷಗಾನ "ವಸುಂಧರಾ ಪರಿಣಯ" ಹಾಗೂ "ಹಿರಣ್ಯಾಕ್ಷ ವಧೆ" ಪ್ರದರ್ಶನ ನಡೆಯಲಿದೆ. ಹಿಮ್ಮೇಳದಲ್ಲಿ ಗಜಾನನ ಭಟ್ಟ ತುಳಗೇರಿ, ಮಂಜುನಾಥ ಕಂಚಿಮನೆ, ಪ್ರಶಾಂತ ಕೈಗಡಿ ಪ್ರಸಾದನ ಎಂ. ಆರ್. ನಾಯ್ಕ ಸಂಗಡಿಗರು ಇರಲಿದ್ದಾರೆ.

ಪ್ರತಿಕ್ರಿಯೆ

Post a Comment

0 Comments