Hot Posts

6/recent/ticker-posts

ಹೋರಾಟ ಕೈಬಿಡದ ನಾಯಕ: ಅನಂತಮೂರ್ತಿ ಹೆಗಡೆ ಅವರಿಂದ ಮತ್ತೆ ಸ್ವಾಭಿಮಾನದ ಪಾದಯಾತ್ರೆ

ಕುಮಟಾ: ಸ್ವಾರ್ಥಕ್ಕಾಗಿ ರಾಜಕೀಯ ಅಧಿಕಾರಕ್ಕಾಗಿ ರಾಜಕೀಯ ಎಂಬ ಎಷ್ಟೋ ವ್ಯಕ್ತಿತ್ವದ ನಡುವೆ ಉತ್ತರ ಕನ್ನಡದ ಸಮಸ್ಯೆ ಪರಿಹಾರಕ್ಕಾಗಿ ಅವಿರತ ಶ್ರಮಿಸುತ್ತಿರುವ ನಾಯಕರೊಬ್ಬರ ಹೋರಾಟ ಜನರ ಮನ ಸೆಳೆದಿದೆ. ಅವರೇ ಅನಂತಮೂರ್ತಿ ಹೆಗಡೆ. ಶ್ರೀ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿಕೊಂಡು ಎಷ್ಟೋ ಬಡವರಿಗೆ ಆಟೋ ಚಾಲಕರಿಗೆ ಅನಾರೋಗ್ಯ ಹೊಂದಿದವರಿಗೆ ಸಹಾಯ ಮಾಡುತ್ತಾ ಸೇವಾ ಕ್ಷೇತ್ರದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ ಅನಂತಮೂರ್ತಿ ಹೆಗಡೆ ಜಿಲ್ಲೆಯ ಮೂಲಭೂತ ಅವಶ್ಯಕತೆಗಳಿಗಾಗಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಈ ವಿಷಯದಲ್ಲಿ ಸಮಸ್ಯೆ ಪರಿಹಾರದ ಬದಲು ರಾಜಕೀಯ ಮಾಡಿದವರೇ ಹೆಚ್ಚು. ಇದರಿಂದ ನೊಂದಿದ್ದು ಬೆಂದಿದ್ದು ಮಾತ್ರ ಉತ್ತರ ಕನ್ನಡದ ಜನತೆ. ಈಗಲಾದರೂ ಸರಿಯೇ ಎಷ್ಟೋ ನಾಯಕರು ನಮ್ಮ ಎದುರು ಇದ್ದಾರೆ ಯಾವ ನಾಯಕನೂ ಕೂಡ ತಾನು ಸಂಸದನಾದರೆ ಮುಂದಿನ ತನ್ನ ಹೆಜ್ಜೆ ಏನು ಎನ್ನುವುದನ್ನು ಪ್ರಚುರಪಡಿಸಿಲ್ಲ. ಆದರೆ ಅನಂತಮೂರ್ತಿ ಹೆಗಡೆ ಮಾತ್ರ ತನಗೆ ಸಂಸದ ಸ್ಥಾನ ದೊರೆತರೆ ತಾನೇನು ಮಾಡಬಲ್ಲೆ ಮಾದರಿ ಸಂಸದನಾಗಿ ಏನು ಕೆಲಸ ಮಾಡಬಹುದು ಎಂಬುದನ್ನು ತೋರಿಸಿ ಕೊಡುತ್ತೇನೆ ಎನ್ನುತ್ತಾರೆ. 

ಜಿಲ್ಲೆಯ ಜನರ ಸ್ವಾಭಿಮಾನಕ್ಕೆ ಅನಂತಮೂರ್ತಿ ಸಾತ್: ಫೆಬ್ರುವರಿ 5 ರಿಂದ 7 ಕುಮಟಾದಿಂದ ಭಟ್ಕಳದವರೆಗೆ ಮತ್ತೆ ಪಾದಯಾತ್ರೆ 


ಜನರ ಜೀವ ಉಳಿಸುವ ದೃಷ್ಟಿಯಿಂದ ಉತ್ತರ ಕನ್ನಡಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅವಶ್ಯವಿದ್ದು ಅದನ್ನು ನಿರ್ಮಾಣ ಮಾಡಲು ತಕ್ಷಣ ಸರ್ಕಾರ ಹಣ ಮಂಜೂರು ಮಾಡಬೇಕು ಎಂದು ಒತಾಯಿಸಿ ಫೆ. ೫ ರಂದು ಕುಮಟಾದಿಂದ ಅನಂತಮೂರ್ತಿ ಹೆಗಡೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಪಾದಯಾತ್ರೆ ಮಾಡುವುದರ ಮೂಲಕ ಸರಕಾರದ ಗಮನ ಸೆಳೆಯುವುದು ಅವರ ಮುಖ್ಯ ಉದ್ದೇಶ. ಮೂರು ದಿನದಲ್ಲಿ ಭಟ್ಕಳವನ್ನು ತಲುಪಿ, ಮಂಕಾಳ ವೈದ್ಯರಿಗೆ ಮನವಿ ನೀಡಲಿದ್ದೇವೆ ಎಂದು ಹೋರಾಟಗಾರ ಅನಂತಮೂರ್ತಿ ಹೆಗಡೆ ಹೇಳುತ್ತಾರೆ.

ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಪಟ್ಟಣದಲ್ಲಿ ಗುರುತಿಸಲಾದ ಸ್ಥಳದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಶೀಘ್ರವಾಗಿ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕುಮಟಾದಿಂದ ಭಟ್ಕಳದ ವರೆಗೆ ಪಾದಯಾತ್ರೆ ನಡೆಸಿ, ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳ ವೈದ್ಯರವರಿಗೆ ಮನವಿ ನೀಡುವುದು ಅವರ ಈ ಬಾರಿಯ ಪಾದಯಾತ್ರೆಯ ರೂಪರೇಷೆ. 


ಬೇಡದ ಯೋಜನೆಗಳಿಗೆ 100 ಕೋಟಿ 200 ಕೋಟಿಯನ್ನು ಕೊಡುತ್ತಿದ್ದಾರೆ ಜನರ ಜೀವ ಉಳಿಸುವ ಆಸ್ಪತ್ರೆ ನಿರ್ಮಾಣಕ್ಕೆ 300 ಕೋಟಿ ನೀಡಲು ಸಾಧ್ಯವಿಲ್ಲವೇ? ಎನ್ನುವುದು ಅವರ ಪ್ರಶ್ನೆ. 

ಮುಂಬರುವ ಬಜೆಟ್ ಅಧಿವೇಶನದಲ್ಲಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಘೋಷಣೆ ಆಗಿದ್ದ ಕುಮಟಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ತಕ್ಷಣ ಹಣ ಬಿಡುಗಡೆಗೆ ಆಗ್ರಹಿಸಿ ಹಾಗೂ ಜಿಲ್ಲೆಯಾದ್ಯಂತ ಪ್ರತಿ ತಾಲೂಕಿನಲ್ಲಿ ಇಂಡಸ್ಟ್ರಿಯಲ್ ಎಸ್ಟೇಟ್ ಮಾಡಬೇಕು. ಹಿರೇಗುತ್ತಿಯಲ್ಲಿರುವ ಕೆ.ಐ.ಎ.ಡಿ.ಬಿ 1800 ಏಕರೆ ಜಾಗದಲ್ಲಿ ಜಿಲ್ಲೆಯ ಲಕ್ಷಾಂತರ ಯುವಕರಿಗೆ ಉದ್ಯೋಗಸಿಗುವಂತ ಯೋಜನೆಗಳಾದ ಇಂಡಸ್ಟ್ರಿಯಲ್, Software Park, ಗಾರ್ಮೆಂಟ್ಸ್ ನಿರ್ಮಾಣ ಮಾಡುವ ಕುರಿತು ಅಧಿಸೂಚನೆ ಹೊರಡಿಸಬೇಕು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ವ್ಯಕ್ತಿಗೆ ತಕ್ಷಣ ಚಿಕಿತ್ಸೆ ಕೊಡಿಸಲು ಮೂರು ಗಂಟೆ ಪ್ರಯಾಣ ಮಾಡಬೇಕಾಗಿದೆ. ಹೃದಯ ಕಾಯಿಲೆ ಸೇರಿದಂತೆ ಯಾವುದೇ ಗಂಭೀರ ಸ್ವರೂಪದ ಸಮಸ್ಯೆಗೂ ಇಲ್ಲಿ ಸ್ಪಂದನೆ ಸಿಗದು. ತುರ್ತು ಚಿಕಿತ್ಸೆ ಮಾಡಿದರೂ ಮುಂದಿನ ಪ್ರಯಾಣ ಅನಿವಾರ್ಯವಾಗಿದೆ. ಕಿಡ್ನಿ, ಮೆದುಳು, ನರ, ಗರ್ಭಕೋಶ, ಲಿವರ್, ಹೀಗೆ ಯಾವುದೇ ಖಾಯಿಲೆಗೂ ಜಿಲ್ಲೆಯಿಂದ ಎರಡೂರು ಬಸ್ಸುಗಳ ಮೂಲಕ ಮಣಿಪಾಲ, ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ತೆರಳುವದು ಅನಿವಾರ್ಯವಾಗಿದೆ. ಇಂತಹ ಒಂದು ಪರಿಸ್ಥಿತಿಯ ನಡುವೆ ಜಿಲ್ಲೆಯ ಜನರ ಅಶೋತ್ತರಗಳ ಬೇಡಿಕೆಗಾಗಿ ಪಾದಯಾತ್ರೆ ನಡೆಸುತ್ತಿದ್ದೇನೆ ಎಂದಿದ್ದಾರೆ ಅನಂತಮೂರ್ತಿ ಹೆಗಡೆ. 

ಜಿಲ್ಲೆಯ ಆಶೋತ್ತರಗಳ ಈಡೇರಿಕೆಗಾಗಿ ಅನಂತಮೂರ್ತಿ ಹೆಜ್ಜೆ

(ಪ್ರತಿ ದಿನ ಬೆಳಗ್ಗೆ 7-00 ರಿಂದ)

ದಿನಾಂಕ : 05-02-2024ಸೋಮವಾರ ಕುಮಟಾ ದಿಂದ ಹೊನ್ನಾವರ 

ದಿನಾಂಕ 06-02-2024 ಮಂಗಳವಾರ ಹೊನ್ನಾವರ ದಿಂದ ಮುರುಡೇಶ್ವರ 

ದಿನಾಂಕ : 07-02-2024 ಬುಧವಾರ ಮುರುಡೇಶ್ವರದಿಂದ ಭಟ್ಕಳದ ಸಚಿವರ ಕಛೇರಿಯವರೆಗೆ 


ಪ್ರತಿಕ್ರಿಯೆ

Post a Comment

0 Comments