Hot Posts

6/recent/ticker-posts

ಜನಮನ ಸೂರೆಗೊಂಡ ನಾಣಿಕಟ್ಟಾ ಯಕ್ಷೋತ್ಸವ

       

ಸಿದ್ದಾಪುರ: ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ನಾಣಿಕಟ್ಟಾದಲ್ಲಿ ಜನವರಿ.26 ರಂದು ಗಣರಾಜ್ಯೋತ್ಸವ ದಿನದಂದು ಸಂಜೆ 7.30ರಿಂದ ತ್ಯಾಗಲಿ ಹಿ.ಪ್ರಾ. ಶಾಲೆಯ ಮೈದಾನ ನಾಣಿಕಟ್ಟಾದಲ್ಲಿ, ಶ್ರೀ ಸಿದ್ಧಿವಿನಾಯಕ ಯಕ್ಷಮಿತ್ರ ಬಳಗ ನಾಣಿಕಟ್ಟಾ ಇವರ ಸಮರ್ಥ ಸಂಯೋಜನೆಯಲ್ಲಿ 'ಹನುಮಾರ್ಜುನ ಮತ್ತು “ಕೃಷ್ಣಾರ್ಜುನ ಕಾಳಗ' ಅದ್ಧೂರಿ ಪೌರಾಣಿಕ ಯಕ್ಷಗಾನ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಸವಿ ನೆನಪಿನಲ್ಲಿ, ಹಿಲ್ಲೂರು ಯಕ್ಷಮಿತ್ರ ಬಳಗ ಶಿರಸಿ ಉ.ಕ. ಮತ್ತು ಅತಿಥಿ ಶ್ರೇಷ್ಠ ಕಲಾವಿದರ ಕೂಡುವಿಕೆಯಲ್ಲಿ ವಿಜ್ರಂಭಣೆಯಿಂದ ಜರುಗಿತು, ಸುಂದರವಾಗಿ ಮೂಡಿ ಬಂದಿತು. ವೇ.ಮೂ. ವಿನಾಯಕ ಸು ಭಟ್ಟ ಅವರ ದಿವ್ಯ ಉಪಸ್ಥಿತಿಯಲ್ಲಿ *"ನಾಣಿಕಟ್ಟಾ ಯಕ್ಷೋತ್ಸವ"* *ಮತ್ತು ಸಭಾ ಕಾರ್ಯಕ್ರಮದ ಆಯೋಜಿಸಲಾಗಿ ಸಭೆಯ ಅಧ್ಯಕ್ಷತೆಯನ್ನು ಜಿಲ್ಲೆಯ ಉತ್ತಮ ಸಂಘ ತ್ಯಾಗಲಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್.ಬಿ. ಹೆಗಡೆ ಮತ್ತೀಹಳ್ಳಿ ವಹಿಸಲಿದ್ದರು, ಉತ್ತರಕನ್ನಡ ಜಿಲ್ಲೆಯ ಪ್ರತಿಷ್ಠಿತ ಟಿ.ಮ್.ಎಸ್‌. ಸಿದ್ದಾಪುರದ ಅಧ್ಯಕ್ಷರು, & ಕೆಡಿಸಿಸಿ ಜಿಲ್ಲಾ ಬ್ಯಾಂಕ್ ಸಿರಸಿ ಇದರ ನಿರ್ದೇಶಕರಾದ ಪ್ರಸಿದ್ಧ ವಕೀಲ ಆರ್ ಎಮ್ ಹೆಗಡೆ ಬಾಳೇಸರ ಮತ್ತು ಜಿಲ್ಲೆಯ ಯುವ ನೇತಾರ ಸಾಮಾಜಿಕ ಹೋರಾಟಗಾರಾದ ಕಲಾ ಪೋಷಕ ಅನಂತಮೂರ್ತಿ ಹೆಗಡೆ ಬ್ಯಾಗದ್ದೆ ಇವರು ವಿಶೇಷ ಆಮಂತ್ರಿತರಾಗಿ ಆಗಮಿಸಿದ್ದರು ಮುಖ್ಯ ಅತಿಥಿಗಳಾಗಿ ಶ್ರೀ ಸ್ವರ್ಣವಲ್ಲೀ ಸೋಂದಾ ಮಹಾಸಂಸ್ಥಾನದ ಆಡಳಿತ ಸಮಿತಿ ಸದಸ್ಯ ಎಂ.ಆ‌ರ್.ಹೆಗಡೆ ಬಾಳೇಜಡ್ಡಿ, ತ್ಯಾಗಲಿ ಗ್ರಾ.ಪಂ. ಅಧ್ಯಕ್ಷ ಯಶೋಧಾ ದತ್ತಾತ್ರೇಯ ನಾಯ್ಕ, ತ್ಯಾಗಲಿ ಪಂಚಾಯತದ ಕ್ರೀಯಾಶೀಲ ಸದಸ್ಯ ಗಣಪತಿ ಹೆಗಡೆ ತ್ಯಾಗಲಿ ಗೋಪಾಲ ಹೆಗಡೆ ವಾಜಗದ್ದೆ, ನಾಣಿಕಟ್ಟಾದ ಹಿರಿಯ ಪ್ರಾಥಮಿಕ ಶಾಲೆ ತ್ಯಾಗಲಿ ಎಸ್‌ಡಿಎಂಸಿ ಅಧ್ಯಕ್ಷ ಗಣೇಶ ನಾಯ್ಕ, ಶ್ರೀ ಸಿದ್ಧಿವಿನಾಯಕ ಯಕ್ಷಮಿತ್ರ ಬಳಗ ನಾಣಿಕಟ್ಟಾ ಸಮಿತಿಯ ಮುಖ್ಯಸ್ಥರಾದ ಮಂಜುನಾಥ ಎಮ್ ಹೆಗಡೆ ಹಂಗಾರಖಂಡ, ಮತ್ತು ಗಣಪತಿ ಗಣೇಶ ಹೆಗಡೆ ಸೂರನ್ ಇವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದರು.

        
ಈ ಎಲ್ಲ ಗಣ್ಯ ಮಹನೀಯರ ಉಪಸ್ಥಿತಿ ಯಲ್ಲಿ ಯಕ್ಷರಂಗದ ದಿಗ್ಗಜ ಭಾಗವತರಾದ ಸುರೇಶ ಶೆಟ್ಟಿ ಶಂಕರನಾರಾಯಣ ಅವರಿಗೆ ಯಕ್ಷ ಗಾನ ಗಂಧರ್ವ ಬಿರುದು ನೀಡಿ ಗೌರವ ಸನ್ಮಾನ ನಾಣಿಕಟ್ಟಾ ಯಕ್ಷೋತ್ಸವ ಅದ್ಧೂರಿಯಾಗಿ ಜರುಗಿತು.ಪ್ರಾರಂಭದಲ್ಲಿ "ಹನುಮಾರ್ಜುನ" ಯಕ್ಷಗಾನ ಮಂಧ್ಯತರದಲ್ಲಿ ಸುಂದರ ಸಭೆ ತದನಂತರ ಕೃಷ್ಣಾರ್ಜುನ ಯಕ್ಷಗಾನ ಸುಂದವಾಗಿ ಮೂಡಿಬಂದಿತು ಹಿಮ್ಮೇಳದಲ್ಲಿ ಸುರೇಶ ಶೆಟ್ಟಿ ಎಸ್, ರಾಮಕೃಷ್ಣ ಹೆಗಡೆ ಹಿಲ್ಲೂರು ಅವರುಗಳ ಸುಮಧುರ ದ್ವಂದ್ವ ಭಾಗವತಿಕೆ ಹಾಡುಗಳು ಅದಕ್ಕೆ ಸಮನಾಗಿ ನಾದ ಶಂಕರ ಶಂಕರ ಭಾಗವತರು ಅನಿರುದ್ಧ ವರ್ಗಾಸರ,ಮದ್ದಲೆಯ ಜೇಕಾರ ಹಾಗೇ ಚಂಡೆಯ ಮಾಂತ್ರಿಕ ವಿಘ್ನೇಶ್ವರ ಕೆಸರಕೊಪ್ಪ ಅವರ ಚಂಡೆಯ ಅಬ್ಬರ ಸೇರಿದ ಐದನೂರುಕ್ಕೂ ಹೆಚ್ಚಿನ ಕಲಾ ಪ್ರೇಕ್ಷಕರ ಮನಸೂರೆಯಾಗಿ ಜನಮನ್ನಣೆ ಗಳಿಸಿತು ಮುಮ್ಮೇಳದಲ್ಲಿ ಹನುಮಾರ್ಜುನದಲ್ಲಿ ಅಂಜನಾದೇವಿಯ ಪುತ್ರ ಕಲಿಹನುಮನಾಗಿ ಗಣಪತಿ ನಾಯ್ಕ ಕುಮಟಾ, ವೀರ ಅರ್ಜುನನಾಗಿ ರಾಮಚಂದ್ರ ಹೆಗಡೆ ಕೊಂಡದಕುಳಿ,ಬ್ರಾಹ್ಮಣನಾಗಿ ಹಾಸ್ಯ ಚಕ್ರವರ್ತಿ ಶ್ರೀಧರ ಭಟ್ಟ ಕಾಸರಕೋಡ, ರಾಮರೂಪನಾಗಿ ಕುಮಾರ ನಿತಿನ ದಂಟ್ಕಲ್ ಸುಂದರ ಅಭಿನಯ ಪ್ರದರ್ಶಿಸಿದರೆ, ನಂತರ ಕೃಷ್ಣಾರ್ಜುನದ ಘನ ಗಾಂಭೀರ್ಯ ದ ಪಾರ್ಥ ನಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತ ಬಳ್ಕೂರು ಕೃಷ್ಣ ಯಾಜಿ ಅವರು ಸುಂದರ ಕೃಷ್ಣ ನಾಗಿ ಯಕ್ಷಯುವರಾಜ ನಾಟ್ಯಸುಂದರ ಯಕ್ಷಕಣ್ಮಣಿ ಕಾರ್ತಿಕ ಹೆಗಡೆ ಚಿಟ್ಟಾಣಿಅವರು, ಸುಭದ್ರ ಯಾಗಿ ಅಭಿನಯ ಚತುರ ಯಕ್ಷಕೌಶಲ್ಯಗಳ ಆಗರ ಗಣೇಶ ನಾಯ್ಕ ಮುಗ್ವಾ,ವಾಯು ಸುಥ ಭೀಮನಾಗಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಅಶೋಕ ಭಟ್ಟ ಸಿದ್ದಾಪುರ ಅವರು ಧಾರುಕನಾಗಿ ಹಾಸ್ಯಚಕ್ರವರ್ತಿ ಶ್ರೀಧರ ಭಟ್ಟ ಕಾಸರಕೋಡ ಅವರು,ವೀರ ಅಭಿಮನ್ಯುನಾಗಿ ರಾಜ್ಯ ಮಟ್ಟದ ಉದಯೋನ್ಮುಖ ಪ್ರತಿಭೆ ಕು.ತುಳಸಿ ಹೆಗಡೆ ಬೆಟ್ಟಕೊಪ್ಪ ಸುಂದರ ಅಭಿನಯ ಪ್ರದರ್ಶನ , ಸಭೆಯಲ್ಲಿ ಇದೇ ಸಂದರ್ಭದಲ್ಲಿ ಯುವ ಯಕ್ಷಗಾನ ಸಂಘಟಕರಾದ , ಇಲ್ಲಿಯವರೆಗೆ 87 ಯಕ್ಷಗಾನಗಳನ್ನು ಯಶಸ್ವಿಯಾಗಿ ಸಂಘಟಿಸಿದ ನಟರಾಜ ಎಮ್ ಹೆಗಡೆ ಹಂಗಾರಖಂಡ ಅವರಿಗೆ  

ಸಾಮಾಜಿಕ ಹೋರಾಟಗಾರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ಹೊರಾಡುತ್ತಿರುವ ಜಿಲ್ಲೆಯ ಯುವ ನೇತಾರ ಅನಂತಮೂರ್ತಿ ಹೆಗಡೆ ಅವರು ಸನ್ಮಾನ ಮಾಡಿ ಇಂತಹಃ ಯಕ್ಷಗಾನ ಸಂಘಟಕರು ಕಲಾ ಪ್ರೋತ್ಸಾಹಕರು ಬೇಕು, ಅವರಿಗೆ ಪ್ರೋತ್ಸಾಹ ಮಾಡಬೇಕು, ಅವರಿಗೆ ನಮ್ಮ ಬೆಂಬಲ ಯಾವತ್ತೂ ಇದೆ ಎಂದರು. ನಾಣಿಕಟ್ಟಾ ಯಕ್ಷಗಾನ ಕಾರ್ಯಕ್ರಮ ಕಲಾ‌ಪ್ರೇಮಿಗಳ ಮನ ಗೆದ್ದಿತು ಸಭೆಯ ಸ್ವಾಗತ ಭಾಷಣವನ್ನು ಸಮಿತಿಯ ಅಧ್ಯಕ್ಷ ನಟರಾಜ ಎಮ್ ಹೆಗಡೆ ನಡೆಸಿದರು ನಿರ್ವಹಣೆಯನ್ನು ಉಪಾಧ್ಯಕ್ಷರಾದ ರಮೇಶ ಟಿ ನಾಯ್ಕ ಅವರು, ವಂದಾರ್ಪಣೆಯನ್ನು ಸಮಿತಿಯ ಕ್ರೀಯಾಶೀಲ ಕಾರ್ಯದರ್ಶಿ ರಮೇಶ ಎನ್ ನಾಯ್ಕ ಬಾಳೇಕೈ ನಡೆಸಿದರೇ, ಹರೀಶ ನಾಯ್ಕ ಬಾಳೇಕೈ, ಮಂಜುನಾಥ ಎಮ್ ಗೌಡ ನಾಣಿಕಟ್ಟಾ ಉಮೇಶ ಗ ಹೆಗಡೆ ಸೂರನ್ , ರಾಮಕೃಷ್ಣ ಭಟ್ಟ ಶೇಲೂರು ನಾಗರಾಜ ನಾಯ್ಕ ಹಂಗಾರಖಂಡ, ಪ್ರವೀಣ ಜಿ ನಾಯ್ಕ ಹಂಗಾರಖಂಡ ಇವರುಗಳು ವೇದಿಕೆಯ ಮೇಲಿದ್ದಂತಹಃ ಗಣ್ಯರಿಗೆ ಪುಷ್ಪಗುಚ್ಚ ನೀಡುವುದರ ಜತೆಗೆ ಪ್ರಸಿದ್ಧ ಭಾಗವತರಾದ ಸುರೇಶ ಶೆಟ್ಟಿ ಎಸ್. ಅವರ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಸಭಾ ಕಾರ್ಯಕ್ರಮವನ್ನು ಮನೋಜ್ಞವಾಗಿ ಅಚ್ಚುಕಟ್ಟಾಗಿ ಸುಂದರವಾಗಿ ನಡೆಸಿಕೊಟ್ಟರು.

ಪ್ರತಿಕ್ರಿಯೆ

Post a Comment

0 Comments