Hot Posts

6/recent/ticker-posts

ಝುಬೇದಾ ಅವರಿಗೆ ಬಿ.ಎಚ್. ಶ್ರೀ ಶಿಕ್ಷಣ ಪ್ರಶಸ್ತಿ

     

ಸಿದ್ಧಾಪುರ: 2024 ನೇ ಸಾಲಿನ ಬಿ.ಎಚ್. ಶ್ರೀಧರ ಶಿಕ್ಷಣ ಪ್ರಶಸ್ತಿಗೆ, ಈ ಬಾರಿ ಸಿದ್ದಾಪುರದ ಎಂ.ಜಿ.ಸಿ. ಕಾಲೇಜಿನ ವಿದ್ಯಾರ್ಥಿನಿ ಝುಬೇದಾ ಆಯ್ಕೆಯಾಗಿದ್ದಾಳೆ. ಬಿ.ಎ. ಅಂತಿಮ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದು ಆಯ್ಕೆಯಾಗಿದ್ದಾಳೆ. ಝುಬೇದಾಳ ತಂದೆ ಅಬ್ಬು ಸಾಬ, ತಾಯಿ ಫಾತಿಮಾ. ಸದ್ಯ ಝುಬೇದಾ ಧಾರವಾಡದಲ್ಲಿ ಕೆ.ಪಿ.ಎಸ್.ಸಿ. ಪರೀಕ್ಷೆಗಾಗಿ ತರಬೇತಿ ಪಡೆಯುತ್ತಿದ್ದಾಳೆ. 

ಪ್ರಶಸ್ತಿ ಪತ್ರ ಹಾಗೂ ರೂ. 2000/- ನಗದನ್ನು ವಿದ್ವಾಂಸ, ಸಾಹಿತಿ, ಪ್ರಾಚಾರ್ಯ ಬಿ.ಎಚ್. ಶ್ರೀಧರರ ಜನ್ಮ ದಿನ ಏಪ್ರಿಲ್ 24-04-2024 ರಂದು ಶಿರಸಿಯಲ್ಲಿ ನಡೆಯಲಿರುವ ಬಿ.ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಂದು ನೀಡಲಾಗುವುದೆಂದು ಸಮಿತಿಯ ಕರ‍್ಯಾಧ್ಯಕ್ಷ ರಾಜಶೇಖರ ಹೆಬ್ಬಾರ ತಿಳಿಸಿದ್ದಾರೆ.

ಪ್ರತಿಕ್ರಿಯೆ

Post a Comment

0 Comments