Hot Posts

6/recent/ticker-posts

ಹೋರಾಟದ ಪಟ್ಟು ಬಿಡದ ಅನಂತಮೂರ್ತಿ ಆಸ್ಪತ್ರೆಗಾಗಿ ಶಿರಸಿಯಲ್ಲಿ ಧರಣಿ: ಬೆಳಗಾವಿಯಲ್ಲಿ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಕೆ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಮೆಡಿಕಲ್ ಕಾಲೇಜು - ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಶಿರಸಿಯಲ್ಲಿ ಧರಣಿ ಮತ್ತು ಬೆಳಗಾವಿಯಲ್ಲಿ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಕೆ ಮಾಡುವುದಾಗಿ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ತಿಳಿಸಿದ್ದಾರೆ. ಈ ಮೂಲಕ ಪಟ್ಟು ಬಿಡದೆ ಉತ್ತರ ಕನ್ನಡ ಜಿಲ್ಲೆಯ ಜನತೆಗಾಗಿ ಹಾಗೂ ಅಭಿವೃದ್ಧಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಈ ಬಾರಿ ದಿನಾಂಕ 27.11.2023 ರಿಂದ 04.12.2023 ಸೋಮವಾರವರೆಗೆ ಹೋರಾಟದ ಮತ್ತೊಂದು ಹೆಜ್ಜೆ ಇಟ್ಟಿದ್ದು ಮುಖ್ಯಮಂತ್ರಿಯವರಿಗೂ ಮನವಿ ಸಲ್ಲಿಸುವದಾಗಿ ಹೇಳಿದ್ದಾರೆ.

ಮೆಡಿಕಲ್ ಕಾಲೇಜು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹೋರಾಟ ಸಮಿತಿ ರಚನೆ

ಪ್ರತಿ ಪಂಚಾಯತ ಮಟ್ಟದಲ್ಲಿ ಕೆಲವರನ್ನ ಹೋರಾಟ ಸಮಿತಿಯ ಸದಸ್ಯರಾಗಿ ಸೇರಿಸಿ ಕೊಳ್ಳಲಾಗುವುದು , ಪದಾಧಿಕಾರಿಗಳ ರಚನೆ ಮಾಡಲಾಗುವುದು, ಹೋರಾಟದಲ್ಲಿ ಆಸಕ್ತಿ ಇದ್ದವರು ಸಂಪರ್ಕಿಸಿ, ಈ ಹೋರಾಟ ಅನಿರ್ದಿಷ್ಟ ಅವಧಿಯವರೆಗೆ ನಡೆಯಲಿದೆ ಸದ್ಯ ಶಾಂತಿಯುತ ಹೋರಾಟ, ಇದಕ್ಕೆ ಜನಪ್ರತಿನಿಧಿಗಳು ಕಿಮ್ಮತ್ತು ಕೊಡದೇ ಅಸಡ್ಡೆ ಮಾಡಿದರೆ ನಮ್ಮ ಹೋರಾಟಕ್ಕೆ ಯಾವುದೇ ಪುರಸ್ಕಾರ ನೀಡದೆ ಹೋದರೆ ಉಗ್ರ ಹೋರಾಟ, ಉಪವಾಸ ಸತ್ಯಾಗ್ರಹ, ಮುಂದೆ ಅಮರಣಾಂತ ಉಪವಾಸ ಮಾಡಲಾಗುವುದು

-ಅನಂತಮೂರ್ತಿ ಹೆಗಡೆ

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ವ್ಯಕ್ತಿಗೆ ತಕ್ಷಣ ಚಿಕಿತ್ಸೆ ಕೊಡಿಸಲೂ ಮೂರು ಗಂಟೆ ಪ್ರಯಾಣ ಮಾಡಬೇಕಾಗಿದೆ. 

ಏಷ್ಟೋ ಬಾರಿ ಮಾರ್ಗ ಮಧ್ಯೆ ಸಾವು ಸಂಭವಿಸುತ್ತಿದೆ ಇದನ್ನ ಕಣ್ಣಾರೆ ಕಂಡರೂ ಸಹ ಸುಮ್ಮನಿದ್ದರೆ ಏನು ಅರ್ಥ?


ಮಂಗಳೂರಿನಲ್ಲಿ ಭಾಗದಲ್ಲಿ 8 ಮೆಡಿಕಲ್ ಕಾಲೇಜು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇದೆ , 

ನಮ್ಮ ಶಿರಸಿ ಕುಮಟಾ ಭಾಗದಲ್ಲಿ ಒಂದೂ ಇಲ್ಲ

ನಮಗೆ ಯಾಕೆ ಶಾಪ ?

ಕ್ಯಾನ್ಸರ್, ಕಿಡ್ನಿ, ಹೃದಯ ಹೀಗೇ ಹಲವಾರು ಖಾಯಿಲೆಗಳಿಗೆ ದಿನಕ್ಕೆ ನಮ್ಮ ಊರಿನ ಸುಮಾರು 500 ಜನ ದೂರದ ಮಂಗಳೂರು, ಹುಬ್ಬಳ್ಳಿ, ಶಿವಮೊಗ್ಗ ಆಸ್ಪತ್ರೆಗೆ ಹೋಗುತ್ತಿದ್ದಾರೆ , ಹೋಗುವ ಅನಿವಾರ್ಯತೆ ಇದೆ

ನಮಗೆ ಶಾಪದ ಮುಕ್ತಿ ಯಾವಾಗ?

ಇನ್ನೂ ಯಾಕೆ ಸುಮ್ಮನಿರಬೇಕು?


ನಮ್ಮ ಜಿಲ್ಲೆಯು ಸಮಸ್ಯೆಗಳ ತಾಣ ವಾಗಿದೆ,ಉತ್ತರವೇ ಕಾಣದ ಉತ್ತರ ಕನ್ನಡ ವಾಗಿದೆ, ಇದಕ್ಕೆ ಕಾರಣ ಜನ ಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ, ಅಸಡ್ಡೆ, ಹಾಗೂ ನಮ್ಮಂತಹ ಪ್ರಜೆಗಳ ಆಲಸ್ಯ, ನಮಗೆ ಸ್ವಾಭಿಮಾನ ಇದ್ದರೆ ಈಗಲಾದರೂ ಹೋರಾಡಲೆ ಬೇಕು, 

ಮೆಡಿಕಲ್ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಹುಮುಖ್ಯ ತಕ್ಷಣ ಆಗಲೇ ಬೇಕು, ಒಂದು ಕುಮಟಾ ಭಾಗದಲ್ಲಿ, ಇನ್ನೊಂದು ಶಿರಸಿ ಭಾಗದಲ್ಲಿ , ಇದಕ್ಕಾಗಿ ನಾವು ಶಿರಸಿ ಯಿಂದ ಪಾದಯಾತ್ರೆ ಮೂಲಕ ಕಾರವಾರ ತಲುಪಿ ಮನವಿ ನೀಡಿದ್ದೇವೆ, ಸರಕಾರದ ಪ್ರತಿಕ್ರಿಯೆ ಇಲ್ಲ, ಇಷ್ಟೊಂದು ಬೇಜವಾಬ್ದಾರಿ ಸಹಿಸಲು ಸಾಧ್ಯವಿಲ್ಲ, ದಿನಾಂಕ 27.11.2023 ಸೋಮವಾರ ಬೆಳಿಗ್ಗೆ 9 ಘಂಟೆಗೆ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಮಿನಿ ವಿಧನಸೌಧಕ್ಕೆ ಬಂದು, ಅಲ್ಲೇ ಕುಳಿತು ಕೊಂಡು, ಪ್ರತಿನಿತ್ಯ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30 ವರೆಗೆ ನಿರಂತರ ಹೋರಾಟ ಮಾಡಲಾಗುವುದು , ಪ್ರತೀ ಪಂಚಾಯತಿ, ಸಹಕಾರಿ ಸಂಘಗಳು,ಮಹಿಳಾ ಮಂಡಳ, ಸಾಮಾಜಿಕ ಸಂಘಟನೆ ಗಳು ಒಂದೊಂದು ದಿನ ಆಗಮಿಸಿ ಹೋರಾಟ ದಲ್ಲಿ ಭಾಗ ವಹಿಸ ಬೇಕು ಎಂಬುದಾಗಿ ವಿನಂತಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.

ಸತತ 7 ದಿನ ಹೋರಾಟದ ನಂತರ ದಿನಾಂಕ 04.12.2023 ಸೋಮವಾರ ಬೆಳಗಾವಿಗೆ ಪ್ರಯಾಣ ಮಾಡಿ ವಿಧಾನ ಸೌಧ ದಲ್ಲಿ ಚಳಿಗಾಲದ ಅಧಿವೇಶದಲ್ಲಿ ಧರಣಿ ಸತ್ಯಾಗ್ರಹ ಮಾಡಿ ನೇರವಾಗಿ ಮುಖ್ಯ ಮಂತ್ರಿಯವರಿಗೆ ಮನವಿ ನೀಡಲಾಗುವುದು , ನಮ್ಮ ಹೊರಟ ನಿರಂತರ 

27.11.2023 ಸೋಮವಾರ ಬೆಳಿಗ್ಗೆ 9.30 ಘಂಟೆಗೆ ಶ್ರೀ ಮಾರಿಕಾಂಬಾ ದೇವಸ್ಥಾನ ಹತ್ತಿರ ಎಲ್ಲರೂ ಆಗಮಿಸಿ ಹೋರಾಟ ವನ್ನಾ ಯಶಸ್ವಿ ಗೊಳಿಸಬೇಕಾಗಿ ಅನಂತ ಮೂರ್ತಿ ಹೆಗಡೆ ವಿನಂತಿಸಿಕೊಂಡಿದ್ದಾರೆ.

ಸಂಪರ್ಕಿಸಿ

ಅನಂತ ಮೂರ್ತಿ ಹೆಗಡೆ

9448317709

ಉಮೇಶ್ ಹರಿಕಾಂತ್

9481633324 

ಸಂತೋಷ್ ನಾಯ್ಕ್

9449995439

ಅಹೀಶ್ ಹೆಗಡೆ

9482306468

ಪ್ರತಿಕ್ರಿಯೆ

Post a Comment

0 Comments