Hot Posts

6/recent/ticker-posts

ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಹಂಗಾರ ಖಂಡದಲ್ಲಿ ಮಕ್ಕಳಿಂದ ಕಾರ್ಯಕ್ರಮ

ಸಿದ್ದಾಪುರ: ದಿನಾಂಕ 8-11-2023 ಬುಧವಾರ "ಅಂಗನವಾಡಿ ಕೇಂದ್ರ ಹಂಗಾರಖಂಡ" ದಲ್ಲಿ ಕರ್ನಾಟಕ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯ ಪ್ರಯುಕ್ತ ಅಂಗನವಾಡಿಯ ಚಿಕ್ಕ ಮಕ್ಕಳಿಂದ ಕಾರ್ಯಕ್ರಮಗಳು ನಡೆದವು. ಸಭಾ ಕಾರ್ಯಕ್ರಮದ ಲ್ಲಿ ತ್ಯಾಗಲಿ ಪಂಚಾಯತದ ವಾರ್ಡ ಸದಸ್ಯ ಗಣಪತಿ ಅಣ್ಣಪ್ಪ ಹೆಗಡೆ ತ್ಯಾಗಲಿ, ಬಾಲವಿಕಾಸ ಸಮಿತಿ ಅಂಗನವಾಡಿ ಹಂಗಾರಖಂಡದ ಅಧ್ಯಕ್ಷೆ ವನಿತಾ ನರೇಂದ್ರ ನಾಯ್ಕ,ಸ್ಪರ್ಧೆಯ ನಿರ್ಣಾಯಕರಾಗಿ ತ್ಯಾಗಲಿ ಸೊಸೈಟಿಯ ನಿರ್ದೇಶಕರಾದ ವಿ ಎಮ್ ಹೆಗಡೆ ಶಿಂಗು,ಮತ್ತು ವೀಣಾ ಪ್ರದೀಪ ಹೆಗಡೆ ಹಂಗಾರಖಂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಲವತ್ತಕ್ಕೂ ಹೆಚ್ಚು ಊರ ನಾಗರಿಕರು ಪಾಲಕರು, ಪೋಷಕರು ಈ ಶುಭ ಸಂದರ್ಭದಲ್ಲಿ ಹಾಜರಿದ್ದರು. ಹಂಗಾರಖಂಡದ ಶ್ರೀ ನಾಗಚೌಡೇಶ್ವರಿ ಸೇವಾ ಸಮಿತಿಯಿಂದ ಮಧ್ಯಾಹ್ನ ಎಲ್ಲರಿಗೂ ಉಪಹಾರ, ಪಾನೀಯ, ಸಿಹಿತಿಂಡಿ ವ್ಯವಸ್ಥೆ ಮಾಡಲಾಗಿತ್ತು.

ಅಂಗನವಾಡಿಯ ಹಾಲಿ ಮುಖ್ಯ ಶಿಕ್ಷಕಿಯರಾದ ಶ್ರೀಮತಿ ರೇಖಾ ಬಾಲಚಂದ್ರ ಹೆಗಡೆ ಅವರು ಪ್ರಾರ್ಥನೆ, ಸ್ವಾಗತ ಮತ್ತು ನಿರ್ವಹಣೆ ಮಾಡಿದರು ಮತ್ತು ಸಹಾಯಕರಾದ ರೇಖಾ ವಾಸುದೇವ ನಾಯ್ಕ ಸಹಾಯ ಮಾಡಿದರು. ಹಂಗಾರಖಂಡ ಮತ್ತು ಸುತ್ತಮುತ್ತ ಊರಿನ ನಲವತ್ತಕ್ಕೂ ಹೆಚ್ಚಿನ ಪಾಲಕರು, ಪೋಷಕರು, ಊರ ನಾಗರಿಕರು ಮಹಿಳೆಯರು ಕಾರ್ಯಕ್ರಮದಲ್ಲಿ ಹಾಜರಿದ್ದರು

ಪ್ರತಿಕ್ರಿಯೆ

Post a Comment

0 Comments