Hot Posts

6/recent/ticker-posts

ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಚಂದನ ವಿದ್ಯಾರ್ಥಿಗಳ ಸಾಧನೆ:

ಶಿರಸಿ: ತಾಲೂಕಾ ಮಟ್ಟದ ಪ್ರಾಥಮಿಕ ಶಾಲಾ ಪ್ರತಿಭಾ ಕಾರಂಜಿಯಲ್ಲಿ ಮಿಯಾಡ್ಸ್ ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲ್ ನ ವಿದ್ಯಾರ್ಥಿಗಳು ಕಿರಿಯ ಮತ್ತು ಹಿರಿಯ ವಿಭಾಗದಲ್ಲಿ ಭಾಗವಹಿಸಿ ಉತ್ತಮ ಪ್ರರ‍್ಶನ ತೋರಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಕಿರಿಯ ವಿಭಾಗ: 3 ನೇ ವರ್ಗದ ಪರಿಣಿತಾ ಜಿ ಭಟ್( ಭಕ್ತಿಗೀತೆ) ,ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾಳೆ ,4 ನೇ ವರ್ಗದ ರಾಜಶ್ರೀ ಭಟ್ಟ (ಕಂಠಪಾಠ ಇಂಗ್ಲೀಷ), 4 ನೇ ವರ್ಗದ ಸಾನ್ವಿ (ಅಭಿನಯ ಗೀತೆ), ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಹಿರಿಯ ವಿಭಾಗ: 6 ನೇ ವರ್ಗದ ಪ್ರತೀಕ್ ಭಟ್ಟ (ಲಘು ಸಂಗೀತ) ,ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾನೆ. 7 ನೇ ವರ್ಗದ ವರ್ಷಿಣ ಹೆಗಡೆ(ಧಾರ್ಮಿಕ ಪಠಣ ಸಂಸ್ಕೃತ), 7 ನೇ ವರ್ಗದ ಸುಜಲಾ ಹೆಗಡೆ (ಆಶು - ಭಾಷಣ), 5 ನೇ ವರ್ಗದ ಖುಷಿ ಗೌಳಿ (ಮಿಮಿಕ್ರಿ), ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. 

 ವಿದ್ಯಾರ್ಥಿಗಳಿಗೆ,ಮಾರ್ಗದರ್ಶಿ ಶಿಕ್ಷಕರುಗಳಿಗೆ ಆಡಳಿತ ಮಂಡಳಿ,ಶಿಕ್ಷಕರು, ಪಾಲಕರು ಅಭಿನಂದಿಸಿ ತಾಲೂಕಾ ಮಟ್ಟದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.

ಪ್ರತಿಕ್ರಿಯೆ

Post a Comment

0 Comments