ಶಿರಸಿ: ನೂಪುರ ನೃತ್ಯಶಾಲೆ ಶಿರಸಿ ಯ ಸುವಿಖ್ಯಾತ ಭರತನಾಟ್ಯ ಗುರು, ಕಲಾವಿದೆ ವಿದುಷಿ ಶ್ರೀಮತಿ ಅನುರಾಧಾ ಹೆಗಡೆ ಹಾಗೂ ವಿದುಷಿ ಕುಮಾರಿ ಕೀರ್ತನಾ ಹೆಗಡೆ ಇವರ ಶಿಷ್ಯೆ ಕುಮಾರಿ ಐಸಿರಿ ಹೇಮಾದ್ರಿ ಇವಳ ರಂಗಪ್ರವೇಶ ಕಾರ್ಯಕ್ರಮ ಇಲ್ಲಿನ ವಿದ್ಯಾಧಿರಾಜ ಕಲಾಕ್ಷೇತ್ರ ದಲ್ಲಿ ಸಾವಿರಾರು ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.
ಕುಮಾರಿ ಐಸಿರಿ ಶಿರಸಿ ತಾಲೂಕಿನ ಬೆಂಗಳೆ ಯ ಶ್ರೀಮತಿ ಗೀತಾ ಹಾಗೂ ಸುಧಾಕರ್ ಹೇಮಾದ್ರಿ ಇವರ ಸುಪುತ್ರಿ. ರಂಗಪ್ರವೇಶ ಕಾರ್ಯಕ್ರಮವನ್ನು ವಿದ್ವಾನ್ ಜಿ ಬಿ ಜನಾರ್ದನ್ ಸಾಗರ ಇವರು ಉದ್ಘಾಟಿಸಿದರು. ಅತಿಥಿಗಳಾಗಿ ಲಕ್ಷ್ಮೀಶ್ ರಾವ್ ಕಲಗುಂಡಿಕೊಪ್ಪ ಹಾಗೂ . ಅಧ್ಯಕ್ಷರಾಗಿ ಜಗನ್ನಾಥ್ ಹೇಮಾದ್ರಿ ಆಗಮಿಸಿದ್ದರು.
ರಂಗಪ್ರವೇಶ ಕಾರ್ಯಕ್ರಮಕ್ಕೆ ನಟುವಾಂಗ ದಲ್ಲಿ ವಿದುಷಿ ಕುಮಾರಿ ಕೀರ್ತನಾ,ಹಾಡುಗಾರಿಕೆ ಯಲ್ಲಿ ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮಾ ಬೆಂಗಳೂರು, ಮೃದಂಗ ದಲ್ಲಿ ವಿದ್ವಾನ್ ಜಿ ಎಸ್ ನಾಗರಾಜ್ ಬೆಂಗಳೂರು ಕೊಳಲಿನಲ್ಲಿ ವಿದ್ವಾನ್ ನಿತೀಶ್ ಅಮ್ಮಣ್ಣಯ್ಯ ಬೆಂಗಳೂರು, ರಿದಂ ಪ್ಯಾಡ್ ಲ್ಲಿ ವಿದ್ವಾನ್ ಡಿ ವಿ ಪ್ರಸನ್ನ ಕುಮಾರ್ ಬೆಂಗಳೂರು ಸಹಕರಿಸದರು. ರಂಗಪ್ರವೇಶದಲ್ಲಿ ಐಸಿರಿ ಪುಷ್ಪಾoಜಲಿ, ಗಣೇಶಸ್ತುತಿ, ಅಲರಿಪು, ಶಿವಸ್ತುತಿ, ವರ್ಣo, ಅಷ್ಟಪದಿ ,ಭಜನ್, ಗುರುಅಷ್ಟಕಂ, ತಿಲ್ಲಾನ ನೃತ್ಯ ಬಂಧಗಳನ್ನು ಅನಾಯಾಸವಾಗಿ ಅತೀ ಮನೋಜ್ಞ ವಾಗಿ ಪ್ರದರ್ಶಿಸಿದಳು ಸಭಾ ಕಾರ್ಯಕ್ರಮವನ್ನು ಶಿಕ್ಷಕಿ ವೀಣಾ ಭಟ್ ನಿರೂಪಿಸಿದರು.
0 Comments