Hot Posts

6/recent/ticker-posts

ನೀವು ಹೀಗೆ ಮಾಡಿಕೊಳ್ಳದೆ ರೋಡಿಗಿಳಿದರೆ ಬೀಳಲಿದೆ ದಂಡ

೨೦೧೯ ರೊಳಗೆ ರಿಜಿಸ್ಟರ್ ಆದ ಎಲ್ಲಾ ವಾಹನಗಳಿಗೆ ಹೊಸದಾಗಿ HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ. ನವೆಂಬರ್ ೧೭ ಕೊನೆಯ ದಿನ. ಅದರ ನಂತರ ದಂಡ ಬೀಳಲಿದೆ. (ಸದ್ಯ ನಿಗದಿಪಡಿಸಿದ ದಿನಾಂಕ) ಆನಲೈನಲ್ಲಿ ಬುಕ್ ಮಾಡಿ ನಿಗದಿತ ದಿನದಂದು ಶೋರೂಂಗೆ ಹೋಗಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು. ದ್ವಿಚಕ್ರ ವಾಹನಕ್ಕೆ ೫೦೦₹ ಕಾರಿಗೆ ೮೦೦₹ ದರ ನಿಗದಿ.

ನಿಯಮ ಹೀಗಿದೆ

* ಸರಕಾರದ ಹೊಸ ನಿಯಮಾವಳಿಗಳ ಪ್ರಕಾರ ೨೦೧೯ ಎಪ್ರಿಲ್‌ಗೂ ಮೊದಲು ನೊಂದಾವಣೆ ಆದ ಎಲ್ಲಾ ವಾಹನಗಳಿಗೆ HSRP (High Security Registration Plate) ಕಡ್ಡಾಯ

* ಎಲ್ಲಾ ವಾಹನಗಳು ತಮ್ಮ ಅಧಿಕೃತ ಶೋರೂಮಿನಲ್ಲಿಯೇ ಈ ನಂಬರ್ ಪ್ಲೇಟ್ ಫಿಟ್ ಮಾಡಿಸಿಕೊಳ್ಳಬೇಕು

* ನವೆಂಬರ್ ೧೭, ೨೦೨೩ ಕೊನೆಯ ದಿನವಾಗಿದ್ದು. ಆ ನಂತರ HSRP ನಂಬರ್ ಪ್ಲೇಟ್ ಇಲ್ಲದೆ

 ರೋಡಿಗಿಳಿದರೆ ದಂಡ ಬೀಳಬಹುದು.

* ನಾವು ನಮ್ಮ ವಾಹನದ ರಿಜಿಸ್ಟರ್ ನಂಬರ್, ಚೆಸ್ ನಂಬರ್ ಮತ್ತು ಇಂಜಿನ್ ನಂಬರ್ ಇವುಗಳನ್ನು ದಾಖಲಿಸಿ ನಂಬರ್ ಪ್ಲೇಟ್ ಬುಕ್ ಮಾಡಿಕೊಳ್ಳಬಹುದು.

*ದ್ವಿಚಕ್ರ ವಾಹನಗಳಿಗೆ 400-500₹ 

ಕಾರುಗಳಿಗೆ 700-800₹ ನಿಗದಿ. ಬುಕ್ ಮಾಡುವಾಗಲೇ ಆನ್ಲೈನ್ ಪೇಮೆಂಟ್ ಮಾಡಬೇಕು.

*ನಿಗದಿತ ದಿನದಂದು ಶೋರೂಮಿಗೆ ಹೋಗಿ ನಂಬರ್ ಪ್ಲೇಟ್ ಬದಲಾಯಿಸಿಕೊಳ್ಳಬೇಕು.

*ಬುಕ್ ಮಾಡುವ ಲಿಂಕ್ 

ಈ ಲಿಂಕ್ ಇಲ್ಲಿ ಕ್ಲಿಕ್ ಮಾಡಿ 

ಪ್ರತಿಕ್ರಿಯೆ

Post a Comment

0 Comments