Hot Posts

6/recent/ticker-posts

ಸೆ 10 ತೆಲಂಗ ಪ್ರೌಢಶಾಲೆಯ "ಸುವರ್ಣ ಸಂಭ್ರಮ ಸ್ನೇಹ ಸಮ್ಮಿಲನ"

             

ಶಿರಸಿ: ಸೆ.10, ರವಿವಾರದಂದು ಬೆಳಿಗ್ಗೆ 9.30ರಿಂದ ಎಮ್.ಇ.ಎಸ್. ಶಿಕ್ಷಣ ಸಂಸ್ಥೆಯ ತೇಲಂಗ ಪ್ರೌಢಶಾಲೆಯ (ಸಹ್ಯಾದ್ರಿ ಪ್ರೌಢಶಾಲೆ) ಹಳೆಯ ವಿದ್ಯಾರ್ಥಿಗಳಿಂದ ‘ಸುವರ್ಣ ಸಂಭ್ರಮ ಸ್ನೇಹ ಸಮ್ಮಿಲನ- 2023’ ಕಾರ್ಯಕ್ರಮ ಏರ್ಪಾಡಾಗಿದೆ. ಪುಷ್ಪನಮನ, ಸರಸ್ವತಿ ಪೂಜೆ, ಸುವರ್ಣ ಸಂಭ್ರಮದ ದೀಪ ಬೆಳಗುವಿಕೆ ಬೆಳಿಗ್ಗೆ 9.30ರಿಂದ ತೇಲಂಗ ಪ್ರೌಢಶಾಲೆಯ ನಟರಾಜ ನೃತ್ಯ ಸಭಾಭವನದಲ್ಲಿ ನಡೆಯಲಿದೆ.

ಮಧ್ಯಾಹ್ನ 3 ಗಂಟೆಗೆ ಎಂ.ಇ.ಎಸ್.ವಾಣಿಜ್ಯ ಮಹಾವಿದ್ಯಾಲಯದ ಸಿಲ್ವರ್ ಜ್ಯುಬಿಲಿ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಭೀಮಣ್ಣ ನಾಯ್ಕ್ ಕಾರ್ಯಕ್ರಮ ಉದ್ಘಾಟಿಸಿಲಿದ್ದಾರೆ.

ಎಂ.ಇ.ಎಸ್. ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ ಅಧ್ಯಕ್ಷತೆ ವಹಿಸುವ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಉಮಾಕಾಂತ ಭಟ್ ಕೆರೆಕೈ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. ಎಂ.ಇ.ಎಸ್. ಉಪಾಧ್ಯಕ್ಷ ನಿತೀನ್ ಕಾಸರಕೋಡ,ಉಪಾಧ್ಯಕ್ಷ ಎಂ.ಜಿ.ಹೆಗಡೆ, ಎಂ.ಇ.ಎಸ್. ಖಜಾಂಚಿ ಸುಧೀರ ಭಟ್, ಪ್ರಧಾನ ಕಾರ್ಯದರ್ಶಿ ಎಸ್.ಪಿ.ಶೆಟ್ಟಿ, ಉಪಸಮಿತಿ ಅಧ್ಯಕ್ಷ ರಾಘವೇಂದ್ರ ಕಾಮತ್, ನಿವೃತ್ತ ಮುಖ್ಯಾಧ್ಯಾಪಕ ಎಸ್.ಜಿ.ದೇವ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಭಾ ಕಾರ್ಯಕ್ರಮದ ತರುವಾಯ ಲಘು ಮನರಂಜನಾ ಕಾರ್ಯಕ್ರಮ ನಡೆಯಲಿದ್ದು, ಸರ್ವರೂ ಆಗಮಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.

ಪ್ರತಿಕ್ರಿಯೆ

Post a Comment

0 Comments