Hot Posts

6/recent/ticker-posts

ದೇಶ ಭಕ್ತಿಗೀತೆ ಗೀತಗಾಯನ ಸ್ಪರ್ಧೆ: ಲಯನ್ಸ್ ಸ್ಕೌಟ್ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

ಶಿರಸಿ: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಶಿರಸಿ ಜಿಲ್ಲಾ ಸಂಸ್ಥೆ, ಶಿರಸಿ ಸಹಯೋಗದಲ್ಲಿ ದಿನಾಂಕ 16/09/2023 ರಂದು ಗಾಣಿಗರ ಸಮುದಾಯ ಭವನ, ಶಿರಸಿಯಲ್ಲಿ ಸ್ಕೌಟ್ಸ್ & ಗೈಡ್ಸ್ ವಿದ್ಯಾರ್ಥಿಗಳಿಗೆ ಆಯೋಜಿಸಿದ ಜಿಲ್ಲಾ ಮಟ್ಟದ ಗೀತಗಾಯನ ಸ್ಪರ್ಧೆಯಲ್ಲಿ ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ & ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದು, ಸ್ಕೌಟ್ ವಿದ್ಯಾರ್ಥಿಗಳಾದ ಪಾರ್ಥ ಪಿ. ಶೆಟ್ಟಿ, ಅಭಿನವ ಭಟ್, ಜೈದೀಪ ಕಾಮತ್, ವಿನೀತ್ ಹೆಗಡೆ, ಅಮಯ ವಾಯ್, ಲೋಹಿತ್ ಆಗೆರ್, ಸೃಜನ್ ಶೆಟ್ಟಿ ಮತ್ತು ಚಿನ್ಮಯ್ ಕರೆಗೆದ್ದೆ ಭಾಗವಹಿಸಿ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ರಾಜ್ಯಮಟ್ಟದ ಗೀತಗಾಯನ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ವಿದ್ಯಾರ್ಥಿಗಳಿಗೆ ಸ್ಕೌಟ್ ಮಾಸ್ಟರ್ ರಾಘವೇಂದ್ರ ಹೊಸೂರು, ಗೈಡ್ಸ್ ಕ್ಯಾಪ್ಟನ್ ಚೇತನಾ ಪಾವಸ್ಕರ್ ಹಾಗೂ ಶಾಲೆಯ ಸಂಗೀತ ಸಹಶಿಕ್ಷಕಿ ದೀಪಾ ಶಶಾಂಕ ಹೆಗಡೆ ಮಾರ್ಗದರ್ಶನ ನೀಡಿರುತ್ತಾರೆ. ಅಂತೆಯೇ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರುಗಳಿಗೆ ಆಯೋಜಿಸಿದ ವೈಯಕ್ತಿಕ ಗೀತಗಾಯನ ಸ್ಪರ್ಧೆಯಲ್ಲಿ ಸ್ಕೌಟ್ ಮಾಸ್ಟರ್ ರಾಘವೇಂದ್ರ ಹೊಸೂರು ದ್ವಿತೀಯ ಮತ್ತು ಗೈಡ್ಸ್ ಕ್ಯಾಪ್ಟನ್ ಚೇತನಾ ಪಾವಸ್ಕರ್ ತೃತೀಯ ಸ್ಥಾನ ಪಡೆದಿರುತ್ತಾರೆ. ವಿದ್ಯಾರ್ಥಿಗಳ ಹಾಗೂ ಶಿಕ್ಷಕರುಗಳ ಈ ಸಾಧನೆಗೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಶಾಲೆಯ ಮುಖ್ಯೋಪಾಧ್ಯಾಪಕ ಶಶಾಂಕ ಹೆಗಡೆ, ಶಿಕ್ಷಕ-ಶಿಕ್ಷಕೇತರ ಬಾಂದವರು, ಶಿರಸಿ ಲಯನ್ಸ್ ಕ್ಲಬ್ ಬಳಗ ಮತ್ತು ಪಾಲಕರ ವೃಂದ ಆಶೀರ್ವಾದ ಪೂರ್ವಕವಾಗಿ ಅಭಿನಂದಿಸಿದ್ದಾರೆ.

ಪ್ರತಿಕ್ರಿಯೆ

Post a Comment

0 Comments