Hot Posts

6/recent/ticker-posts

ಪ್ರತಿಭಾ ಕಾರಂಜಿಯಲ್ಲಿ ಶಿರಸಿ ಲಯನ್ಸ ಪ್ರಾಥಮಿಕ ವಿದ್ಯಾರ್ಥಿಗಳ ಸಾಧನೆ:

ಶಿರಸಿ: ದಿನಾಂಕ 02 ರಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ವತಿಯಿಂದ ಸರಕಾರಿ ಪ್ರಾಥಮಿಕ ಶಾಲೆ ನಂ 3 ಶಿರಸಿ ಇಲ್ಲಿ ನಡೆದ 2023-24ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶಿರಸಿ ಲಯನ್ಸ್ ಕಿರಿಯ ಮತ್ತು ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿ ಅತ್ಯುತ್ತಮ ಸಾಧನೆಗೈದಿದ್ದಾರೆ. 27 ಸ್ಪರ್ಧೆಗಳಲ್ಲಿ ಭಾಗವಹಿಸಿದ ನಮ್ಮ ಶಾಲೆಯ ವಿದ್ಯಾರ್ಥಿ ಗಳು 21 ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿದ್ದಾರೆ 10 ಪ್ರಥಮ ಬಹುಮಾನ 6 ದ್ವಿತೀಯ ಬಹುಮಾನ 5 ತೃತೀಯ ಬಹುಮಾನ ತಮ್ಮದಾಗಿಸಿಕೊಂಡಿರುತ್ತಾರೆ.

ಕಿರಿಯರ ವಿಭಾಗದಲ್ಲಿ ಚಿತ್ರಕಲೆ ನಿಶ್ಚಿತ್ ಭಟ್ ,ಸಂಸ್ಕೃತ ಧಾರ್ಮಿಕ ಪಠಣ ವಿಧಾತ ಡಿ. ಬಿ.ಭಕ್ತಿ ಗೀತೆ ಸಂವಿಧಾ ಜಿ ಹೆಗಡೆ,ಕಥೆ ಹೇಳುವುದು ಸಾನ್ವಿ ಹೆಗಡೆ ಪ್ರಥಮ ಸ್ಥಾನ ಗಳಿಸಿದ್ದಾರೆ.ಕ್ಲೇ ಮಾಡ್ಲಿಂಗ್ ಪ್ರಣವ್ ಗಿರೀಶ್ ಮಡಿವಾಳ ದ್ವಿತೀಯ ಸ್ಥಾನ,ಕನ್ನಡ ಕಂಠಪಾಠ ಚೈತನ್ಯ ಜಿ ಹೆಗಡೆ ಲಘು ಸಂಗೀತ, ಮಾನ್ವಿ ನಾಯ್ಕ,ಅಭಿನಯ ಗೀತೆ ನೇಹಾ ಎನ್ ಹೆಗಡೆ ತೃತಿಯ ಸ್ಥಾನ ಗಳಿಸಿರುತ್ತಾರೆ. 

ಇನ್ನು ಹಿರಿಯರ ವಿಭಾಗದಲ್ಲಿ ಸಂಸ್ಕೃತ ಧಾರ್ಮಿಕ ಪಠಣ ಲಾವಣ್ಯ ಹೆಗಡೆ, ಕವನ ವಾಚನ ಅಂಶಿಕಾ ಹೆಗಡೆ, ಕಥೆ ಹೇಳುವುದು ಕಲ್ಯಾಣ ಭಟ್ ,ಮಿಮಿಕ್ರಿ ಅನಿತಾ ಭಟ್, ಅರೇಬಿಕ್ ಧಾರ್ಮಿಕ ಪಠಣ ಪರ‍್ಖಾನ್ ಮೂಡಿ, ಆಶುಭಾಷಣದಲ್ಲಿ ಪ್ರಥಮ ಹೆಗಡೆ ಪ್ರಥಮಅಭಿನಯ ಗೀತೆ ಅಂಶಿಕಾ ಹೆಗಡೆ ,ಕನ್ನಡ ಕಂಠಪಾಠ ಮತ್ತು ಭಕ್ತಿ ಗೀತೆ ಚಿನ್ಮಯ್ ಕೆರೆಗದ್ದೆ , ಲಘು ಸಂಗೀತ ಕಲ್ಯಾಣ್ ಭಟ್, ಚಿತ್ರಕಲೆ ಸಿಂಚನ ಮುರುಡೇಶ್ವರ ದ್ವಿತೀಯ ಸ್ಥಾನ ಗಳಿಸಿರುತ್ತಾರೆ ಹಾಗೂ ಕ್ಲೇ ಮಾಡ್ಲಿಂಗ್ ಅಮೃತಾ ಜೆ ಮರ‍್ಡೇಶ್ವರ ,ಹಿಂದಿ ಕಂಠಪಾಠ ಅನುಷ್ಕಾ ಎ. ನಾಯ್ಕ ತೃತೀಯ ಸ್ಥಾನ ಗಳಿಸಿರುತ್ತಾರೆ.

ವಿಧ್ಯರ‍್ಥಿಗಳ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು, ಶಿಕ್ಷಕ ವೃಂದ, ಶಿಕ್ಷಕೇತರ ಸಿಬ್ಬಂದಿಗಳು, ಸಾಧಕ ವಿದ್ಯಾರ್ಥಿಗಳನ್ನು ಮತ್ತು ಅವರ ಪಾಲಕರನ್ನು, ಮಾರ್ಗದರ್ಶಕ ಶಿಕ್ಷಕರನ್ನು ತುಂಬು ಹೃದಯದಿಂದ ಅಭಿನಂದಿಸುತ್ತದೆ. ಸಾಧನೆಗೈದ ವಿದ್ಯಾರ್ಥಿಗಳಿಗೆ ಈ ಸಾಧನೆಗೆ ಸಹಕರಿಸಿದ ಪಾಲಕರಿಗೆ, ತರಬೇತಿ ನೀಡಿದ ಸಹ ಶಿಕ್ಷಕರಿಗೆ, ಶಿರಸಿ ಲಯನ್ಸ ಕ್ಲಬ್ ಬಳಗ, ಶಿರಸಿ ಲಯನ್ಸ ಎಜುಕೇಷನ್ ಸೊಸೈಟಿ ಆಡಳಿತ ಮಂಡಳಿ, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದಿಸಿರುತ್ತಾರೆ

ಪ್ರತಿಕ್ರಿಯೆ

Post a Comment

0 Comments