Hot Posts

6/recent/ticker-posts

ದೇಶ ಭಕ್ತಿಗೀತೆ ಗೀತಗಾಯನ ಸ್ಪರ್ಧೆ: ಹೆಗಡೆಕಟ್ಟಾ ಗೈಡ್ಸ್ ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ

ಶಿರಸಿ: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಶಿರಸಿ ಜಿಲ್ಲಾ ಸಂಸ್ಥೆ, ಶಿರಸಿ ಸಹಯೋಗದಲ್ಲಿ ದಿನಾಂಕ 16/09/2023 ರಂದು ಗಾಣಿಗರ ಸಮುದಾಯ ಭವನ, ಶಿರಸಿಯಲ್ಲಿ ಸ್ಕೌಟ್ಸ್ & ಗೈಡ್ಸ್ ವಿದ್ಯಾರ್ಥಿಗಳಿಗೆ ಆಯೋಜಿಸಿದ ಜಿಲ್ಲಾ ಮಟ್ಟದ ಗೀತಗಾಯನ ಸ್ಪರ್ಧೆಯಲ್ಲಿ ಶಿರಸಿ ಹೆಗಡೆಕಟ್ಟಾದ ಶ್ರೀ ಗಜಾನನ ಪ್ರೌಢ ಶಾಲೆಯ ಗೈಡ್ಸ್ ವಿದ್ಯಾರ್ಥಿನಿಯರು ಭಾಗವಹಿಸಿದ್ದು, ಕುಮಾರಿ ಸೌಖ್ಯ ಹೆಗಡೆ, ಕುಮಾರಿ ಧನ್ಯ ಮಡಿವಾಳ, ವಿಜೇತಾ, ಚೈತ್ರ, ಪೂರ್ಣಿಮಾ, ವನಿತಾ, ಲತಾ, ದಿಶಾ ಭಾಗವಹಿಸಿ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ರಾಜ್ಯಮಟ್ಟದ ಗೀತಗಾಯನ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. 

ವಿದ್ಯಾರ್ಥಿನಿಯರಿಗೆ ಸಹ ಶಿಕ್ಷಕಿ ವೀಣಾ ಭಟ್, ತನುಜಾ ಹೆಗಡೆ ಹಾಗೂ ಶಾಲಾ ಶಿಕ್ಷಕರು ಮಾರ್ಗದರ್ಶನ ನೀಡಿದ್ದರು. ವಿದ್ಯಾರ್ಥಿನಿಯರ ಸಾಧನೆಗೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಶಾಲೆಯ ಮುಖ್ಯೋಪಾಧ್ಯಾಪಕ ಶೈಲೇಂದ್ರ ಎಂ ಎಚ್, ಶಿಕ್ಷಕ ವೃಂದ ಅಭಿನಂದಿಸಿದೆ.

ಪ್ರತಿಕ್ರಿಯೆ

Post a Comment

0 Comments