ಶಿರಸಿ: ಭಾರತ ರತ್ನ ಸರ್. ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ ಅಂಗವಾಗಿ ಇಲ್ಲಿನ ಎಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ ಅಸೋಸಿಯೇಶನ್ ವತಿಯಿಂದ 'ನಮ್ಮದೇಶದ ಅಭಿವೃದ್ಧಿಯಲ್ಲಿ ಎಂಜಿನೀಯರುಗಳ ಪಾತ್ರ' ಎಂಬ ವಿಷಯದ ಮೇಲೆ ಆಯೋಜಿಸಿದ್ದ ತಾಲ್ಲೂಕು ಪ್ರೌಢಶಾಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀ ಗಜಾನನ ಪ್ರೌಢಶಾಲೆ ವಿದ್ಯಾರ್ಥಿನಿ ಸೌಖ್ಯ ಹೆಗಡೆ ಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯಕ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಇಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷರು ಕಾರ್ಯದರ್ಶಿಗಳು ಹಾಗೂ ಲಯನ್ಸ ಶಿಕ್ಷಣ ಸಂಸ್ಥೆಯ ಪ್ರಮುಖರು ಹಾಜರಿದ್ದರು.
ಸೆ.15ರಂದು ಸಂಜೆ 7ರಿಂದ ಲಯನ್ಸ್ ಸಭಾ ಭವನದಲ್ಲಿ ನಡೆದ ಎಂಜಿನೀಯರ್ಸ್ ಡೇ ಕಾರ್ಯಕ್ರಮದಲ್ಲಿ ಪ್ರಶಸ್ತಿಪತ್ರ ಮತ್ತು ನಗದು ಬಹುಮಾನ ನೀಡಲಾಯಿತು. ನಗರದ ಲಯನ್ಸ್ ಶಾಲೆಯಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ 24 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಓಣಿಕೇರಿಯ ನೆಹರೂ ಪ್ರೌಢಶಾಲೆಯ ಅನನ್ಯ ಪಟಗಾರ ದ್ವಿತೀಯ, ಶ್ರೀನಿಕೇತನ ಶಾಲೆ ಇಸಳೂರಿನ ನವ್ಯಶ್ರೇಯ ಪಿ.ಆರ್. ಹಾಗೂ ಗೋಳಿಯ ಶ್ರೀಸಿದ್ದಿವಿನಾಯಕ ಪ್ರೌಢಶಾಲೆ ಅನುಜ್ಞಾ ಎಸ್.ಹೆಗಡೆ ತೃತೀಯ ಸ್ಥಾನ ಪಡೆದಿದ್ದಾರೆ.
0 Comments