Hot Posts

6/recent/ticker-posts

ವಿವಿಧ ವಿಭಾಗಗಳಲ್ಲಿ ಚಂದನ ವಿದ್ಯಾರ್ಥಿಗಳ ಸಾಧನೆ

ದೇಶ ಭಕ್ತಿ ಗೀತೆಗಾಯನ ಸ್ಪರ್ಧೆ ಚಂದನ ವಿದ್ಯಾರ್ಥಿಗಳು ದ್ವಿತೀಯ:

 

ಶಿರಸಿ: ದಿನಾಂಕ 16 ರಂದು ಶ್ರೀ ಗಜಾನನ ಸೆಕೆಂಡರಿ ಸ್ಕೂಲ್ ಹೆಗಡೆಕಟ್ಟಾದಲ್ಲಿ ನಾಡೋಜ ಗೊ. ರು. ಚನ್ನಬಸಪ್ಪನವರ ಹೆಸರಿನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಸ್ಥಳೀಯ ಸಂಸ್ಥೆ ಶಿರಸಿ ಇವರು ಶಿರಸಿ ತಾಲೂಕಿನ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ತಾಲೂಕಾ ಮಟ್ಟದ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆಯಲ್ಲಿ ಮಿಯಾರ್ಡ್ಸ ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲ್‌ನ ಗೈಡ್ಸ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿರುತ್ತಾರೆ. ವಿದ್ಯಾರ್ಥಿಗಳಿಗೆ ಮತ್ತು ಮಾರ್ಗದರ್ಶಿ ಶಿಕ್ಷಕರಿಗೆ ಆಡಳಿತ ಮಂಡಳಿ, ಶಿಕ್ಷಕರು,ಪಾಲಕರು ಅಭಿನಂದಿಸಿದ್ದಾರೆ

           ಜಿಲ್ಲಾ ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆ

 

ಶಿರಸಿ: ದಿನಾಂಕ 16-08-2023 ರಂದು ಶಿರಸಿಯ ಲಯನ್ಸ್ ಶಾಲೆಯಲ್ಲಿ ನಡೆದ ಶಿರಸಿ ತಾಲುಕಾ ಮಟ್ಟದ ಪ್ರೌಢ ಶಾಲಾ ಕ್ರೀಡಾ ಕೂಟದ ಚೆಸ್ ಮತ್ತು ಯೋಗ ವಿಭಾಗದಲ್ಲಿ ಮಿಯಾರ್ಡ್ಸ ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲ್‌ನ 9 ನೇ ವರ್ಗದ ವಿದ್ಯಾರ್ಥಿ ಮಿಹಿರ್ ಹೆಗಡೆ (ಚೆಸ್), 10ನೇ ವರ್ಗದ ಸಿಂಚನಾ ಹೆಗಡೆ (ಯೋಗ), ಸ್ಫರ್ಧೆಗಳಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. 

ಇವರ ಸಾಧನೆಗೆ ಆಡಳಿತ ಮಂಡಳಿ, ಶಿಕ್ಷಕರು,ಪಾಲಕರು ಹರ್ಷವ್ಯಕ್ತಪಡಿಸಿ ಮುಂದಿನ ಹಂತಕ್ಕೆ ಶುಭ ಹಾರೈಸಿದ್ದಾರೆ.

ಪ್ರತಿಕ್ರಿಯೆ

Post a Comment

0 Comments