Hot Posts

6/recent/ticker-posts

ಖಾಕಿ ಎನ್ನುವುದು ಸೇವೆಯ ಸಂಕೇತ: ಆಟೋ ಚಾಲಕರ ನೆರವಿಗೆ ನಿಂತ ಅನಂತಮೂರ್ತಿ ಹೆಗಡೆ

ಹೊನ್ನಾವರ: ಖಾಕಿ ಎನ್ನುವುದು ಸೇವೆಯ ಸಂಕೇತ. ಇಂದು ಸಾರಿಗೆ ಉದ್ಯಮ ಬಹಳ ಕಷ್ಟದಲ್ಲಿದೆ. ಚಾಲಕರು ತಮ್ಮ ಹೊಟ್ಟೆ ಬಟ್ಟೆ ಕಟ್ಟಿಕೊಂಡು ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಕುಟುಂಬದ ಜೀವನ ನಿರ್ವಹಣೆ ಬಗ್ಗೆ ಸದಾ ಕಾಲ ಯೋಚಿಸುತ್ತಾರೆ. ಇಂದು ಪಾಸಿಂಗ್ ಯೋಜನೆ ತಂದಿದ್ದು, ಮುಂದಿನ ದಿನದಲ್ಲಿ ಇನ್ಸರೆನ್ನ,ಮಕ್ಕಳ ಶೈಕ್ಷಣಿಕ ಸಹಾಯ, ಉನ್ನತ ವ್ಯಾಸಂಗಕ್ಕೆ ಸೂಕ್ತ ತರಬೇತಿ ಕಾರ್ಯಕ್ರಮದ ಮೂಲಕ ನೆರವಾಗಲು ತೀರ್ಮಾನಿಸಿದ್ದೇನೆ ಎಂದು ಅನಂತಮೂರ್ತಿ ಹೆಗಡೆ ಹೇಳಿದರು. ಅವರು ಭಾನುವಾರ ಹೊನ್ನಾವರ ಪಟ್ಟಣದ ಲಯನ್ನ ಕ್ಲಬ್ ಸಭಾಭವನದಲ್ಲಿ ಶಿರಸಿ ಬ್ಯಾಗದ್ದೆಯ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ, ತಾಲೂಕಿನ ಆಟೋ ರಿಕ್ಷಾ ಚಾಲಕ, ಮಾಲಕರಿಗೆ ಉಚಿತ ಸಮವಸ್ತ ವಿತರಣೆ, ರಿಕ್ಷಾ ಪಾಸಿಂಗ್ ಯೋಜನೆ, ಔತಣಕೂಟ ಕಾರ್ಯಕ್ರಮದಲ್ಲಿ ಮಾತನಾಡಿದರು. 

                              ಗಣ್ಯರ ನುಡಿ

ಶಾಸಕ ದಿನಕರ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರಿಕ್ಷಾ ಚಾಲಕರ ಸಂಘಟನೆಯಲ್ಲಿ ಒಂದು ಶಕ್ತಿ ಇದೆ. ನಮ್ಮ ಜಿಲ್ಲೆಯಲ್ಲಿ ರಿಕ್ಷಾ ಚಾಲಕರು, ಯಾವುದೇ ಆರೋಪವಿರದ ರೀತಿಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ ಎಂದರು. ಜಿ.ಪಂ. ಮಾಜಿ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ ಟ್ರಸ್ಟ ಮೂಲಕ ಅನೇಕ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ಅನಂತಮೂರ್ತಿಹೆಗಡೆಯವರ ಕಾರ್ಯ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು. 

                 ಸರಳ, ಸೌಜನ್ಯದ "ಮೂರ್ತಿ"

              

ಅನಂತಮೂರ್ತಿ ಹೆಗಡೆ ಬೆಂಗಳೂರು ಮತ್ತು ಶಿರಸಿಯಲ್ಲಿ ಉದ್ಯೋಗ ನಡೆಸುತ್ತಿದ್ದಾರೆ. ತಾವು ಗಳಿಸಿದ ಹಣದಲ್ಲಿ ಸಾಧ್ಯವಿದ್ದಷ್ಟೂ ಸಮಾಜಕ್ಕೆ ಹಿಂದಿರುಗಿಸಬೇಕೆಂಬ ಮನೋಭಾವನೆ ಅವರದ್ದು. ಸೇವಾಭಾವಕ್ಕೆ ಎತ್ತಿದ ಕೈ ಅನ್ನುವುದು ಅವರ ಇತ್ತೀಚಿನ ದಿನಗಳಲ್ಲಿ ನಡೆದ ಸಮಾಜ ಪರ ಚಟುವಟಿಕೆ ಗಳೇ ಸಾಕ್ಷಿ. ಬಡತನದಿ೦ದ ಕುಟುಂಬದಿಂದ ಬಂದು ಜಿಲ್ಲೆಯೆಲ್ಲೆಡೆ ಹಲವು ಕಾರ್ಯಕ್ರಮದ ಮೂಲಕ ಜನಾನುರಾಗಿಯಾಗಿದ್ದಾರೆ. ಯಾವುದೇ ಹಮ್ಮು ಬಿಮ್ಮು ಗಳಿಲ್ಲದೆ ಖಾಕಿಯನ್ನೇ ಧರಿಸಿ ರಿಕ್ಷಾ ಚಾಲಕ ಮಾಲಕರ ಬೆಂಬಲಕ್ಕೆ ನಿಂತಿದ್ದು ವಿಶೇಷವೇನಿಸಿತು.

                         ಬಡವರ ಬಂಧು 

  

ವೇದಿಕೆಯಲ್ಲಿ ಲಯನ್ಸ್ ಅಧ್ಯಕ್ಷ ಎಂ.ಜಿ.ನಾಯ್ಕ ಅವರು ತಾಲೂಕಿನ ಆಟೋ ರಿಕ್ಷಾ ಯೂನಿಯನ್ ವತಿಯಿಂದ ಅನಂತಮೂರ್ತಿ ಹೆಗಡೆಯವರನ್ನು ಸನ್ಮಾನಿಸಿ ಬಡವ ಬಂಧು ಬಿರುದು ನೀಡಿ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.

ಅಧ್ಯಕ್ಷ ಶಿವರಾಜ ಮೇಸ್ತ, ಅನಂತಮೂರ್ತಿ ಹೆಗಡೆ ಕುಟುಂಬದವರಾದ ಮಹಾಬಲೇಶ್ವರ ಹೆಗಡೆ, ಶಾರದಾ ಹೆಗಡೆ, ಜಗದೀಶ ಹೆಗಡೆ ರಿಕ್ಷಾ ಯೂನಿಯನ್ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರತಿಕ್ರಿಯೆ

Post a Comment

0 Comments