ಅಡಿಕೆ ಧಾರಣೆ ಇಳಿತದ ಬಗ್ಗೆ ರೈತರು ಭಯಪಡುವ ಅಗತ್ಯವಿಲ್ಲ: ಕಿಶೋರ್ ಕುಮಾರ್ ಕೊಡಗಿ

ಶಿರಸಿ: ಅನಧಿಕೃತವಾಗಿ ಬರುವ ಅಡಿಕೆಯನ್ನು ನಿಯಂತ್ರಿಸಿ, ನಮ್ಮಲ್ಲಿಯ ಅಡಿಕೆ ಬೆಳಗಾರರಿಗೆ ಅನುಕೂಲವಾಗುವ ರೀತಿಯಲ್ಲಿ ಕಠಿಣ ನಿರ್ಧಾರಗಳ ಅವಶ್ಯಕತೆಗಳಿವೆ. ಅಡಿಕೆ ಧಾರಣೆ ಖಂಡಿತವಾಗಿ ಏರುತ್ತದೆ. ಕ್ಯಾಂಪ್ಕೋ ಅಡಿಕೆ ಧಾರಣೆ ಸ್ಥಿರತೆಯತ್ತ ಶ್ರಮಿಸುತ್ತಿದೆ ಎಂದು ಕ್ಯಾಂಪ್ಕೋ ಲಿಮಿಟೆಡ್ ಮಂಗಳೂರು ಅಧ್ಯಕ್ಷ ಕಿಶೋರ ಕುಮಾರ ಕೊಡಗಿ ಹೇಳಿದರು. ಅವರು ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.. ಆಮದು ಆಗುತ್ತಿರುವ ಅಡಿಕೆಯ ನಿಯಂತ್ರಣಕ್ಕೆ ಕ್ಯಾಂಪ್ಕೋ, ಟಿ ಎಸ್ ಎಸ್ ಅಂತಹ ಪ್ರಬಲ ಸಂಸ್ಥೆಗಳು ನಿರಂತರವಾಗಿ ಗಮನ ಹರಿಸುತ್ತಿವೆ. ಇಷ್ಟಾಗಿ ನಾವು ಗಮನ ಹರಿಸದಿದ್ದರೆ ಅಡಿಕೆ ಧಾರಣೆ ಮುನ್ನೂರು ರೂಪಾಯಿಗಳಿಗೆ ಇಳಿದಿರುತ್ತಿತ್ತು. ಕ್ಯಾಂಪ್ಕೋ ಗುಣಮಟ್ಟದ ಕಾಳುಮೆಣಸನ್ನು ವಿದೇಶಕ್ಕೆ ರವಾನಿಸುವ ಸಂಪೂರ್ಣ ತಂತ್ರಜ್ಞಾನವನ್ನು ಹೊಂದಿದ್ದು ಅದು ಪ್ರಗತಿಯಲ್ಲಿದೆ ಎಂದರು. ಕ್ಯಾಂಪ್ಕೋ, ಟಿ ಎಸ್ ಎಸ್ ಮ್ಯಾಮ್ ಕೋಸ್ ಸೇರಿದಂತೆ ಎಲ್ಲ ಸಂಸ್ಥೆಗಳು ನಾವು ಒಟ್ಟಾಗಿ ಶ್ರಮಿಸಬೇಕಾದ ಅವಶ್ಯಕತೆ ಇದೆ ಎಂದರು. 


ಸಂಸ್ಥೆ ಬೆಳೆಯಬೇಕು ಈ ನಿಟ್ಟಿನಲ್ಲಿ ಶತಮಾನ ಕಂಡ ಹೆಗಡೆ ಕಟ್ಟಾ ಸೇವಾ ಸಹಕಾರಿ ಸಂಘ ಈ ಭಾಗದಲ್ಲಿ ಹೆಸರು ಮಾಡುತ್ತದೆ. ರೈತರು ಸಹಕಾರಿ ಸಂಸ್ಥೆಯ ಮೂಲಕವೇ ಮುಂದುವರಿಯಬೇಕು. ಮುಂದಿನ ದಿನಗಳಲ್ಲಿ ಸಹಕಾರಿ ವ್ಯವಸ್ಥೆ ಬಲಗೊಳ್ಳುತ್ತದೆ. ಉಪಬೆಳೆಗಳಾದ ಕೋಕಮ್ ಪುನರ್ಪುಳಿ ಏಲಕ್ಕಿ ಇಂಥ ಬೆಳೆ ಬೆಳೆಯಲು ರೈತರು ಮನಸು ಮಾಡಬೇಕು, ಇದಕ್ಕೆ ಕ್ಯಾಂಪ್ಕೋ ಕೂಡ ಸಹಾಯ ಸಲ್ಲಿಸಲು ಸಿದ್ಧವಿದೆ ಎಂದು ಕಾರ್ಯಕ್ರಮದ ಮುಖ್ಯ ಅತಿಥಿ ಶಂಭುಲಿಂಗ ಹೆಗಡೆ ಹೇಳಿದರು. 


ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸಂಘದ ಅಧ್ಯಕ್ಷ ಎಂ ಪಿ ಹೆಗಡೆ ಕೋಟ್ಟೆ ಗದ್ದೆ 1919 ರಲ್ಲಿಯೇ ಸಂಘ ಆರಂಭಗೊಂಡರೂ ಸ್ವಾತಂತ್ರ್ಯ ನಂತರವೇ ಅಭಿವೃದ್ಧಿಗೊಂಡಿತು. ಶಿಕ್ಷಣ ಆರೋಗ್ಯ ಹಾಗೂ ಊರಿನ ಯಾವುದೇ ಅಭಿವೃದ್ಧಿ ವಿಷಯದಲ್ಲಿ ಸಂಘದ ನಡೆಯ ಪ್ರಮುಖವಾಯಿತು. ಮುಂದಿನ 40 ವರ್ಷಗಳ ಯೋಜನೆಯನ್ನು ಅಂದಿನ ಹಿರಿಯರು ಮಾಡಿದ್ದರಿಂದ ಇಂದು ನಾವು ಶತಮಾನದ ಸಾಕ್ಷಿಯಾಗಿದ್ದೇವೆ. ಇಂದಿನ ದಿನ ನಮ್ಮ ಸಂಘದ ಇತಿಹಾಸದಲ್ಲಿಯೇ ಅತ್ಯಂತ ಪ್ರಮುಖವಾದದ್ದು ಎಂದರು.


ಸಂಘದ ಇತಿಹಾಸ ಹೆಗಡೆಕಟ್ಟಾ ಭಾಗದ ಅಮೂಲ್ಯ ಮಾಹಿತಿಗಳ ಶತ ಸ್ಮೃತಿ ಸ್ಮರಣ ಸಂಚಿಕೆಯನ್ನು ಹಾಗೂ ಹೆಗಡೆಕಟ್ಟಾ ಶತಮಾನೋತ್ಸವ ಲೋಗೋವನ್ನು ಎಂ ಆರ್ ಹೆಗಡೆ ಗೊಡ್ವೇಮನೆ ಮಾಜಿ ಮುಖ್ಯ ಚುನಾವಣಾ ಆಯುಕ್ತರು ಬಿಡುಗಡೆ ಗೊಳಿಸಿದರು. ಅವರು ಮಾತನಾಡುತ್ತಾ ನಮ್ಮ ಸಹಕಾರಿ ಸಂಘ ಬ್ಯಾಂಕ್ ಅಷ್ಟೇ ಅಲ್ಲ ಸಕಲ ವ್ಯವಸ್ಥೆಯನ್ನು ಒಂದೇ ಸೂರಿನಲ್ಲಿ ಸಿಗುವಂತೆ ಮಾಡಿದೆ ಕೃಷಿ ಚಟುವಟಿಕೆ ಸಂಕೀರ್ಣವಾಗಿದೆ ಇಂತಹ ದಿನಗಳಲ್ಲಿ ಸಹಕಾರಿ ವ್ಯವಸ್ಥೆ ಇನ್ನಷ್ಟು ಬಲಗೊಳ್ಳಬೇಕುಎಂದರು.


ಟಿ ಎಸ್ ಎಸ್ ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಮಾತನಾಡಿ, ಉದ್ಯೋಗ ಸೃಷ್ಟಿಸುವ ಕೆಲಸವನ್ನು ಸಹಕಾರಿ ಸಂಸ್ಥೆಗಳು ಮಾಡುತ್ತಿದೆ, ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘ ನೂರು ವರ್ಷವನ್ನು ಪೂರೈಸಿದ ಇದರ ಭವಿಷ್ಯ ಉಜ್ವಲವಾಗಲಿ. ಕರೋನ ಕಾಲದ ಸಂಕಷ್ಟಗಳನ್ನು ಸಹಕಾರಿ ಸಂಸ್ಥೆಗಳು ವ್ಯವಸ್ಥಿತವಾಗಿ ಎದುರಿಸಿದ ರೀತಿ ಇಡೀ ಸಮಾಜಕ್ಕೆ ಮಾದರಿ ಎಂದು ಅಭಿಪ್ರಾಯಪಟ್ಟರು. 


ಹಳ್ಳಿಗೆ ಹೊಸ ತರುವಾಯ ಬರುತ್ತಾ ಇಲ್ಲ ಹಳ್ಳಿ ಎಲ್ಲ ವೃದ್ಧಾಶ್ರಮ ಆಗುತ್ತಿದೆ ಮುಂದಿನ ಸಮಸ್ಯೆ ಗಂಭೀರವಾಗಿದೆ, ಮುಂದೆ ಏನು ಎನ್ನುವ ಬಗ್ಗೆ ಸಹಕಾರಿ ಸಂಸ್ಥೆಗಳು ಗಂಭೀರವಾಗಿ ಆಲೋಚಿಸಬೇಕಿದೆ. ನಮ್ಮ ಹಿರಿಯರು ಭದ್ರವಾಗಿ ನಿಲ್ಲಬೇಕಾದರೆ ಸಹಕಾರಿ ವ್ಯವಸ್ಥೆಯ ಕೊಡುಗೆ ಬಹಳವಾಗಿದೆ. ಅದಕ್ಕಾಗಿ ಯುವ ಜನತೆ ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಕೆಎಂಎಫ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆಗೆ ಕೆಶಿನ್ಮನೆ ಹೇಳಿದರು. 


ಕೃಷಿ ಕ್ಷೇತ್ರ ಸಹಕಾರಿ ಸಂಘ ಒಂದಕ್ಕೊಂದು ಪೂರಕ, ಗ್ರಾಮೀಣ ಸಹಕಾರಿ ಸಂಘಗಳು ಕೃಷಿಕರ ಹತ್ತಿರ ಕೆಲಸ ಮಾಡುವ ಸಂಸ್ಥೆಗಳು, ಬ್ರಿಟಿಷರು ಹುಟ್ಟು ಹಾಕಿದ ಈ ವ್ಯವಸ್ಥೆ ಇಂದು ಉಚ್ಛ್ರಾಯ ಸ್ಥಿತಿಯಲ್ಲಿದೆ. ಕೃಷಿಕರಿಗೆ ಸಂಸ್ಥೆಗಳು ಜವಾಬ್ದಾರಿ ತೆಗೆದುಕೊಂಡು ಕಾರ್ಯವನ್ನು ಮಾಡಿಕೊಡುವುದು ಇಂದು ಅನಿವಾರ್ಯತೆಯತ್ತ ಸಾಗಿದೆ ಎಂದರು. 


ಕುಮಾರಿ ರಶ್ಮಿ ಅವರ ಪ್ರಾರ್ಥನೆಯಿಂದ ಆರಂಭಗೊಂಡ ಕಾರ್ಯಕ್ರಮವನ್ನು ಶ್ರೀಮತಿ ಗಿರಿಜಾ ಹೆಗಡೆ ನಿರೂಪಿಸಿ ವಂದಿಸಿದರು.



ಮುಂದಿನ 40 ವರ್ಷಗಳ ಆಲೋಚನೆಯನ್ನು ಹಿಂದಿನ ಹಿರಿಯರು ಮಾಡಿದ್ದರು, ಈಗ ನಾವು ಶತಮಾನ ಸಂಭ್ರಮಕ್ಕೆ ಸಾಕ್ಷಿಯಾಗಿದ್ದೇವೆ. ಸಹಕಾರ ವ್ಯವಸ್ಥೆ ಎನ್ನುವುದು ಇಂದು ಪೂರ್ತಿ ಊರಿನ ಅಭಿವೃದ್ಧಿಗೆ ನಾಂದಿ ಆಯಿತು.


ಎಂ.ಪಿ.ಹೆಗಡೆ ಕೊಟ್ಟೆಗದ್ದೆ


(ಸೇವಾ ಸಹಕಾರಿ ಸಂಘ ಹೆಗಡೆಕಟ್ಟಾ ಅದ್ಯಕ್ಷ)


ಅನಧಿಕೃತವಾಗಿ ಬರುವ ಅಡಿಕೆಯನ್ನು ನಿಯಂತ್ರಿಸಿ, ನಮ್ಮಲ್ಲಿಯ ಅಡಿಕೆ ಬೆಳಗಾರರಿಗೆ ಅನುಕೂಲವಾಗುವ ರೀತಿಯಲ್ಲಿ ಕಠಿಣ ನಿರ್ಧಾರಗಳ ಅವಶ್ಯಕತೆಗಳಿವೆ. ಅಡಿಕೆ ಧಾರಣೆ ಖಂಡಿತವಾಗಿ ಏರುತ್ತದೆ. ಕ್ಯಾಂಪ್ಕೋ ಅಡಿಕೆ ಧಾರಣೆ ಸ್ಥಿರತೆಯತ್ತ ಶ್ರಮಿಸುತ್ತಿದೆ.



ಕಿಶೋರ್ ಕುಮಾರ ಕೊಡಗಿ 

(ಕ್ಯಾಂಪ್ಕೋ ಲಿ ಮಂಗಳೂರು ಅಧ್ಯಕ್ಷ)


Post a Comment

0 Comments