ಶ್ರೀ ಮಾರಿಕಾಂಬಾ ದೇವಸ್ಥಾನ ಯುಗಾದಿ ಪೂಜಾ ಸಮಯ ಬದಲು
ಶಿರಸಿ: ದೇವಾಲಯದಲ್ಲಿ ಯುಗಾದಿ ಹಬ್ಬದ ದಿನ ಮಾ.22ರಂದು ಬೆಳಿಗ್ಗೆ 7ಘಂಟೆಗೆ ಮಹಾಪೂಜೆ ನಡೆಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೆಳಿಗ್ಗೆ 8ಗಂಟೆಗೆ ಮಹಾಪೂಜೆ ಮಾಡುವುದರಿಂದ ಜನದಟ್ಟಣೆ ಹೆಚ್ಚಾಗುವುದರಿಂದ ಭಕ್ತಾದಿಗಳ ಅನುಕೂಲತೆ ದೃಷ್ಟಿಯಿಂದ ಸಮಯ ಬದಲಾವಣೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮುಂಡಿಗೇಸರ ದೇವಸ್ಥಾನಕ್ಕೆ ಹೊಸ ಕಮೀಟಿ: ರಾಜೀವ ಹೆಗಡೆ ಅಧ್ಯಕ್ಷ
ಶಿರಸಿ: ತಾಲೂಕಿನ ಮುಂಡಿಗೇಸರದ ಶ್ರೀ ಗಣಪತಿ ದೇವಸ್ಥಾನದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ರಾಜೀವ ಮಹಾಬಲೇಶ್ವರ ಹೆಗಡೆ ಬಳಗಂಡಿ ಹಾಗೂ ಕಾರ್ಯದರ್ಶಿಯಾಗಿ ಬೆಳ್ಳೆಕೇರಿಯ ಅನಂತ ಟಿ.ಹೆಗಡೆ ಆಯ್ಕೆ ಆಗಿದ್ದಾರೆ. ಉಪಾಧ್ಯಕ್ಷರಾಗಿ ಜಾನ್ಮನೆಯ ಕಮಲಾಕರ ಹೆಗಡೆ, ನಿರ್ದೇಶಕರಾಗಿ ಮೋಹನ ಮಂ ಹೆಗಡೆ ಮುಂಡಗೇಸರ, ಪ್ರಭಾಕರ ಮಂಜುನಾಥ ಹೆಗಡೆ ಮುಂಡಗೇಸರ ಆಯ್ಕೆ ಆಗಿದ್ದಾರೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
0 Comments