ಯಾವ ಪ್ಲಾಸ್ಟಿಕ್ ಗೆ ಕಡಿಮೆ ಇಲ್ಲ ಅಡಿಕೆಯ ಹಾಳೆ. ಅಡಿಕೆಯ ಉಪ ಉತ್ಪನ್ನಗಳು ಬಳಕೆಯಲ್ಲಿ ಬಂದಾಗ ರೈತರಿಗೂ ಅನುಕೂಲ. ಪರಿಸರಕ್ಕೂ ಪೂರಕ. ಅಡಿಕೆಯಿಂದ ಹಲವು ಉಪ ಉತ್ಪನ್ನಗಳು ತಯಾರಾಗುತ್ತಿವೆ. ಅಡಿಕೆಯ ಮೌಲ್ಯವರ್ಧನೆ ಕುರಿತಂತೆ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಅಡಿಕೆ ಹಾಳೆಯಿಂದ ನಾವು ಪ್ಲೇಟ್, ದೊನ್ನೆ, ಕಪ್ ತಯಾರಾಗುತ್ತಿದ್ದುದ್ದನ್ನು ನಾವು ನೋಡಿದ್ವಿ. ಆದರೆ ಅಡಿಕೆಯ ಉಪ ಉತ್ಪನ್ನಗಳು ಮತ್ತಷ್ಟು ಹೆಚ್ಚುತ್ತಲೇ ಸಾಗಿದೆ ಇದು ರೈತರಿಗೆ ಅದರಲ್ಲಿಯೂ ಅಡಿಕೆ ಬೆಳಗಾರರಿಗೆ ಸಂತಸದ ವಿಷಯ.
ಅಡಿಕೆ ಹಾಳೆಯಿಂದ ತಯಾರಾದ ಪೆನ್ ಸ್ಟ್ಯಾಂಡ್ ತುಂಬಾ ಸೊಗಸಾಗಿದೆ. ಯಾವ ಯಾವ ಪ್ಲಾಸ್ಟಿಕ್ ಗಳನ್ನು ಬಳಸುವುದಕ್ಕಿಂತ ಇದು ಅತ್ಯಂತ ಅನುಕೂಲಕರ ಮತ್ತು ಪ್ರಕೃತಿದತ್ತ ಉತ್ಪನ್ನ ಆಗಿದೆ.
ಅಡಿಕೆ ಹಾಳೆಯಿಂದ ಸುಂದರ ಬ್ಯಾಗ್ ಇದಂತೂ ಎಲ್ಲರ ಕಣ್ಮನ ಸೆಳೆಯುತ್ತದೆ.ಅಡಿಕೆ ಹಾಳೆಯಿಂದ ತಯಾರಾದ ಚಪ್ಪಲಿ ಹೊಸತು ಎನ್ನಬಹುದು. ಆಕರ್ಷಕವಾಗಿ ಇದರ ವಿನ್ಯಾಸ ಮಾಡಲಾಗಿದೆ.ಅಡಿಕೆ ಹಾಳೆಯ ಫೈಲ್ ಕೂಡ ಕಂಡುಬರುತ್ತಿದ್ದು ಇದು ಕೂಡ ತುಂಬಾ ಆಕರ್ಷಕವಾಗಿದೆ. ಅಡಿಕೆಯ ಉಪ ಉತ್ಪನ್ನಗಳು ಹೆಚ್ಚಿದಂತೆ ರೈತರಿಗೆ ಅನುಕೂಲ ಅದನ್ನು ಬಳಕೆ ಮಾಡುವವರು ಕೂಡ ಮುಂದಾಗಬೇಕು ಅದರಿಂದ ದೇಶದ ಬೆನ್ನೆಲುಬು ಆದ ರೈತನ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ
0 Comments