ಬಹುಶಃ ಇಂತಹ ಸಂದರ್ಭಗಳಲ್ಲಿ ಈ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಮುಂದುವರಿದ ಮಹನೀಯರ ಪಾತ್ರ ಅತ್ಯಂತ ಪ್ರಮುಖವಾದದ್ದು. ಇಂದು ಇಲ್ಲಿನ ವಿದ್ಯಾರ್ಥಿಗಳು ಉನ್ನತ ಮಟ್ಟದ ಹುದ್ದೆಗಳಲ್ಲಿ ಇದ್ದಾರೆ ಎನ್ನುವುದಾದರೆ ಇಲ್ಲಿನ ಶಿಕ್ಷಣ ಸಂಸ್ಥೆಗಳೇ ಅದಕ್ಕೆ ಕಾರಣ. ಆದರೆ ಇದಕ್ಕೆ ಮುನ್ನ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕಿದವರ ಪ್ರಯತ್ನ ಅಭಿನಂದನೀಯ. ನನ್ನ ಊರು ಎನ್ನುವ ಹೆಮ್ಮೆ ಒಂದೆಡೆಯಾದರೆ, ಅದರ ಜೊತೆ ಜೊತೆ ಸಾಗುವುದು ನನ್ನ ಶಾಲೆ ಎಂಬ ಭಾವನಾತ್ಮಕ ಪದ ಕೂಡ. ಎಲ್ಲರೂ ಕೂಡ ಕಲಿತು ದೂರ ದೂರದ ಊರುಗಳಿಗೆ ಹೋಗಿ ಒಮ್ಮೆ ಊರಿಗೆ ಬಂದಾಗ ಅವರ ಸೆಳೆತ ಇರುವುದು ಕಲಿತ ಶಾಲೆಯಲ್ಲಿ.
ಪ್ರೌಢಶಾಲೆಯನ್ನು ಹುಟ್ಟು ಹಾಕಿದ ಮಹನೀಯರು, ಅಂತೆಯೇ ಇಷ್ಟು ವರ್ಷಗಳ ಕಾಲ ಅಕ್ಕರೆಯಿಂದ ಬೆಳೆಸಿಕೊಂಡು ಬಂದ ಎಲ್ಲರ ಶ್ರಮದ ದ್ಯೋತಕ ಕ್ಕೆ ಒಂದು ನೆನಪು "ನಾವು 50 ವರ್ಷಗಳನ್ನು ದಾಟಿದ್ದೇವೆ"ಎಂಬುದು. ಶಾಲೆಯ ಇತಿಹಾಸದಲ್ಲಿ "ಸುವರ್ಣ ಮಹೋತ್ಸವ" ಎಂಬುದೊಂದು ಮೈಲಿಗಲ್ಲಾಗಿ ಜೊತೆಗೆ ನೆನಪಾಗಿ ಉಳಿಯುತ್ತದೆ. ಹಿಂದಿನ ಎಲ್ಲಾ ಅಧ್ಯಕ್ಷರುಗಳ, ಸದಸ್ಯರ ಪ್ರೀತಿ ಪ್ರಸ್ತುತ ಅಧ್ಯಕ್ಷರ, ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರು, ಸದಸ್ಯರ ನಿಸ್ವಾರ್ಥ ಸೇವೆ, ಪ್ರಸ್ತುತ ಆಡಳಿತ ಮಂಡಳಿಯವರ ಅಭಿಮಾನ ಊರ ನಾಗರಿಕರ ಸೇವಾಪಾರತೆ ಸವಾಲಿನ ಕೆಲಸದ ಯಶಸ್ಸಿಗೆ ಕಾರಣವೆನಿಸಿತು, ಹಾಗೂ ಸದಸ್ಯರ ಶಿಕ್ಷಕ, ಶಿಕ್ಷಕೇತರ ಹಾಗೂ ಹೆಗಡೆಕಟ್ಟಾ ಮತ್ತು ಸುತ್ತಲಿನ ಊರ ಗಣ್ಯರ ಸೇವಾಪರತೆ ಇಂದಿನ ಸಾಧನೆಯ ಸೇತುವೆಯೆನಿಸಿತು.
ಪರ ಊರಿನಲ್ಲಿದ್ದೂ ಭಾವನೆಯ ಸೆಳೆತದೊಂದಿಗೆ ಶಾಲೆಯ ಅಭಿವೃದ್ಧಿಗೆ ಮುಂದಾದ ಹಳೆ ವಿದ್ಯಾರ್ಥಿಗಳ ತನು ಮನ ಧನ ಸಹಕಾರ ಮರೆಯಲಾರದ್ದು. ನೆನಪು ಮಧುರ ಇದಕ್ಕೊಂದು ಕಾರಣ "ಸುವರ್ಣ ಸಂಭ್ರಮ" ಇವುಗಳ ಪ್ರೀತಿ ಪೂರ್ವಕ ದ್ಯೋತಕವಾಗಿ ಅನಾವರಣಗೊಳ್ಳಲಿರುವ ನೂತನ ಸಭಾಭವನ "ಸುವರ್ಣ ಸುರಭಿ" ಇದು ಎಲ್ಲರ ಪ್ರತಿನಿಧಿ ಅಲ್ಲದೆ ಹೆಗಡೆಕಟ್ಟಾ ಶ್ರೀ ಗಜಾನನ ಪ್ರೌಢಶಾಲೆಗೆ ಒಂದು ಹೆಮ್ಮೆಯ ಗರಿ ಎಂದೇ ಹೇಳಬಹುದು.
✍️ವಿನಾಯಕ ಹೆಗಡೆ ಪತ್ರಕರ್ತ
ಶಿರಸಿ ಶ್ರೀ ಗಜಾನನ ಪ್ರೌಢಶಾಲೆ ಹೆಗಡೆಕಟ್ಟಾ ಇದರ ಸುವರ್ಣ ಮಹೋತ್ಸವ ಸವಿನೆನಪಿನ ನೂತನ ಸಭಾಭವನ "ಸುವರ್ಣ ಸುರಭಿ" ಉದ್ಘಾಟನಾ ಸಮಾರಂಭ ಜನವರಿ 6 ರಂದು ಜರುಗಲಿದೆ ತನ್ನಿಮಿತ ಈ ಲೇಖನ.
0 Comments