ಸಿ.ಎಂ ಗೆ ಸಲ್ಲಿಕೆ ಆಗಿಲ್ವಂತೆ, ಸುಸಜ್ಜಿತ ಆಸ್ಪತ್ರೆ ಪ್ರಸ್ತಾವನೆ!


ಕಾರವಾರ: ಸುಸಜ್ಜಿತ ಆಸ್ಪತ್ರೆ ಬೇಕೆಂದು ಜಿಲ್ಲೆಯ ಜನ ಹೋರಾಡುತ್ತಿದ್ದಾರೆ. ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಆಸ್ಪತ್ರೆಗಾಗಿ ಈಗಾಗಲೇ ಹೋರಾಟ ನಡೆಸಿದ್ದಾರೆ. ಆದರೆ, ಜಿಲ್ಲೆಗೆ ಆಸ್ಪತ್ರೆ ಅಗತ್ಯವಿರುವ ಬಗ್ಗೆ ಆರೋಗ್ಯ ಅಧಿಕಾರಿಗಳಿಂದ ಸರ್ಕಾರಕ್ಕೆ ಪ್ರಸ್ತಾವನೆಯೇ ಸಲ್ಲಿಕೆಯಾಗಿಲ್ಲ ಎಂದು ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಳಲಾದ ಪ್ರಶ್ನೆಯೊಂದಕ್ಕೆ ಸರ್ಕಾರದಿಂದ ಉತ್ತರ ನೀಡಲಾಗಿದೆ. 2019 ರಲ್ಲಿಯೇ ಆಸ್ಪತ್ರೆಗೆ ಆಗ್ರಹಿಸಿ ಲಕ್ಷಾಂತರ ಟ್ವಿಟ್ ಸಲ್ಲಿಕೆಯಾಗಿದ್ದವು. ಮುಖ್ಯಮಂತ್ರಿ, ಆರೋಗ್ಯ ಸಚಿವರು ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಟ್ಯಾಗ್ ಮಾಡಿ ಜನ ಟ್ವಿಟ್ ಅಭಿಯಾನ ನಡೆಸಿದ್ದರು. 


ಇದರ ನಂತರ ಮೂರುವರೆ ವರ್ಷ ಕಳೆದರೂ ಆರೋಗ್ಯ ಅಧಿಕಾರಿಗಳ ವರದಿ ಮುಖ್ಯಮಂತ್ರಿ ಸಚಿವಾಲಯ ತಲುಪಿಲ್ಲ. ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಸಂಬಂಧಿಸಿ ಸಲ್ಲಿಕೆಯಾದ ವರದಿಯ ಪ್ರತಿ ಕೋರಿ ಮಾಹಿತಿ ಹಕ್ಕು ಕಾಯ್ದೆ ಅಡಿ ಅಚ್ಯುತ ಕುಮಾರ ಯಲ್ಲಾಪುರ ಅವರು ಸಲ್ಲಿಸಿದ ಅರ್ಜಿಗೆ ಉತ್ತರಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಪದ್ಮಾ ಅವರು 'ಮುಖ್ಯಮಂತ್ರಿ ಸಚಿವಾಲಯಕ್ಕೆ ಆರೋಗ್ಯಾಧಿಕಾರಿಗಳಿಂದ ಯಾವುದೇ ವರದಿ ಸಲ್ಲಿಕೆಯಾಗಿಲ್ಲ' ಎ೦ದು ಉತ್ತರಿಸಿದ್ದಾರೆ. ಹಳೆಯ ದಿನಾಂಕದೊಂದಿಗೆ ಶನಿವಾರ ಇಮೇಲ್ ಮೂಲಕ 'ವರದಿ ಸಲ್ಲಿಕೆಯಾಗಿಲ್ಲ' ಎಂಬ ಉತ್ತರ ನೀಡಲಾಗಿದೆ. ಈ ಬಗ್ಗೆ ನಾಡಿನ ಪ್ರಮುಖ ಪತ್ರಿಕೆ ಸಂಯುಕ್ತ ಕರ್ನಾಟಕ ಕೂಡ ವರದಿ ಮಾಡಿದೆ.

ಅಚ್ಯುತ ಕುಮಾರ ಯಲ್ಲಾಪುರ ಅವರು ಹಂಸ ಕ್ಕೆ ನೀಡಿದ ಮಾಹಿತಿ

 "ಉತ್ತರ ಕನ್ನಡ ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಕೋರಿ 08 ಜೂನ್ 2019ರಂದು ಜನ ಹೋರಾಟ ನಡೆಸಿದಾಗ 'ಆರೋಗ್ಯ ಅಧಿಕಾರಿಗಳಿಂದ ವರದಿ ಪಡೆಯುವೆ' ಎಂದು ಮುಖ್ಯಮಂತ್ರಿಗಳು ಟ್ವೀಟ್ ಮಾಡಿ ತಿಳಿಸಿದ್ದರು. ಮೂರುವರೆ ವರ್ಷ ಕಳೆದರೂ ಆ ವರದಿ ಸಲ್ಲಿಕೆಯೇ ಆಗಿರಲಿಲ್ಲ. ಈ ಬಗ್ಗೆ ಶನಿವಾರ ಎರಡು ತಿಂಗಳ ಹಿಂದಿನ ದಿನಾಂಕದೊಂದಿಗೆ ನನಗೆ ಇ-ಮೇಲ್ ಮೂಲಕ ಮಾಹಿತಿ ಒದಗಿಸಲಾಗಿದೆ" ಎಂದಿದ್ದಾರೆ.


Post a Comment

0 Comments