ಗಮನ ಸೆಳೆಯುತ್ತಿದ್ದಾನೆ ಕೆಂಪುಕೋಟೆಯಲ್ಲಿ ವಿರಾಜಿತ ಗಣಪ

ಶಿರಸಿ: ಝೂ ಸರ್ಕಲ್ ಬಳಿ ಇರುವ ಗಣಪ ಗಮನ ಸೆಳೆಯುತ್ತಿದ್ದಾನೆ. ಶಿರಸಿಯ ಸಾರ್ವಜನಿಕರು ಒಮ್ಮೆ ಅತ್ತ ನೋಡುವಂತೆ ಕಲಾಕೃತಿ ನಿರ್ಮಾಣಗೊಂಡಿದ್ದು ಝೂ ಸರ್ಕಲ್ ಗಣಪನ ವಿಶೇಷ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭವನ್ನು ಈ ಬಾರಿಯ ಗಣೇಶೋತ್ಸವಕ್ಕೆ ಅಳವಡಿಸಿಕೊಂಡ ಆ ಭಾಗದ ಮಂಡಳಿ ಶ್ಲಾಘನೆಗೆ ಪಾತ್ರವಾಗಿದೆ. ಶಿರಸಿಯ ಹೊಸ ಬಸ್ ನಿಲ್ದಾಣ ಮತ್ತು ಹೊಸ ಹಳೆ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಪಕ್ಕದಲ್ಲಿರುವ ಕೆಂಪುಕೋಟೆ ಪರ ಊರಿನ ನಾಗರಿಕರನ್ನು ಬೆರಗುಗೊಳಿಸುತ್ತಿದೆ. 

ಕೆಂಪುಕೋಟೆಯ ಕಲಾಕೃತಿ ನಿರ್ಮಾಣಗೊಂಡಿದ್ದು ಅದರಲ್ಲಿ ಗಣಪನನ್ನು ಪ್ರತಿಷ್ಠಾಪಿಸಿದ್ದು ಗಮನ ಸೆಳೆಯುತ್ತಿದೆ. ಕೆಂಪುಕೋಟೆ ಪ್ರತಿಕೃತಿಯನ್ನು ರಾಮಕೃಷ್ಣ ಶಿರಾಲಿ ಮತ್ತು ಸಂಗಡಿಗರು ಶಿರಸಿ ಇವರು ನಿರ್ಮಾಣ ಮಾಡಿದ್ದಾರೆ. ಹಾಗೂ ಖ್ಯಾತ ಕಲಾವಿದ ಜಿ.ಡಿ. ಭಟ್ ಕೆಕ್ಕಾರ್ ಗಣಪನ ಮೂರ್ತಿಯನ್ನು ತಯಾರಿಸಿದ್ದಾರೆ. ಒಟ್ಟಾರೆ ಈ ಬಾರಿಯ ಝೂ ಸರ್ಕಲ್ ಗಣೇಶ ವಿಶೇಷವೇ ಸರಿ.


Post a Comment

0 Comments