ಮೈ – ಕೈ ನೋವಿಗೆ ಮನೆ ಉಪಾಯ!

ಮೈ ಕೈ ನೋವಾದರೆ ಖಾರಾಗುವಷ್ಟು ಮೆಣಸಿನ ಕಾಳು, ಜೀರಿಗೆ, ಬೆಲ್ಲ, ನೀರಿಗೆ ಸೇರಿಸಿ ಕುದಿಸಿ, ಹಾಲು ಅಥವಾ ತುಪ್ಪ ಹಾಕಿಕೊಂಡು ಬಿಸಿ ಬಿಸಿ 2 ಹೊತ್ತು ಕುಡಿಯಬೇಕು. ಕೆಂಪು ಒಣ ಮೆಣಸನ್ನು ಬೀಜ ತೆಗೆದು ಬೇಯಿಸಿ ಉಪ್ಪು, ವಾಟೇ ಹುಳಿ, 1 ಚಮಚ ಬೆಲ್ಲ ಹಾಕಿ ರುಬ್ಬಿ, ಗಟ್ಟಿ ಕುದಿಸಿಟ್ಟುಕೊಂಡು ಮೊದಲು ಬಿಸಿ ಅನ್ನಕ್ಕೆ ತುಪ್ಪ, ಮೆಣಸಿನ ಚಟ್ಟಿ ಹಾಕಿಕೊಂಡು 4 ದಿನ ಉಂಡರೂ ಮೈ ಕೈ ನೋವು ಕಡಿಮೆಯಾಗುತ್ತದೆ. ದೊಡ್ಡದೊಂದು ಚಮಚ ಬೆಳ್ಳುಳ್ಳಿ ಬೇಳೆಯನ್ನು ಸುಲಿದು ತುಪ್ಪದಲ್ಲಿ ಹುರಿದು ಮೊದಲು ಬಿಸಿ ಅನ್ನಕ್ಕೆ ಲಿಂಬುರಸ, ಹುರಿದ ಬೆಳ್ಳುಳ್ಳಿ ಹಾಕಿಕೊಂಡು 2 ಹೊತ್ತು ಉಂಡರೂ ಕಡಿಮೆಯಾಗುತ್ತದೆ.

ಕೃಪೆ: ಹವ್ಯಕ ಪಾಕ ವಿಧಾನ

ಶ್ರೀಮತಿ ಗಣಪಿ ವೆಂ ಭಟ್ಟ ತಟ್ಟೀಕೈ


Post a Comment

0 Comments