ದಾರಿಯಲ್ಲಿ ಹೋಗುತ್ತಿರುವಾಗ ನಾವು ಹುತ್ತವನ್ನು ಕಾಣುತ್ತೇವೆ. ಹುತ್ತದ ಮಣ್ಣು ಪ್ರಕೃತಿಯ ಸೃಷ್ಟಿ. ಇದನ್ನು ರೋಗಕ್ಕೆ ಮದ್ದಾಗಿ ಬಳಸಬಹುದು.
ಹುತ್ತದ ಮಣ್ಣು ನೋವಿನ ಪರಿಹಾರಕ್ಕೆ ತುಂಬಾ ಪರಿಣಾಮಕಾರಿ. ಹುತ್ತದ ಮಣ್ಣನ್ನು ತಂದು ಪುಡಿ ಮಾಡಿ ಅದಕ್ಕೆ ಬೆಲ್ಲ ಹುಣಸೆ ಹಣ್ಣು ಅರಿಶಿಣ ಬೋಳಕಾಳು ಪುಡಿಮಾಡಿ ಬೊಳ ಕಾಳಿಗೆ ಬದಲಾಗಿ ಒಣಗಿದ ಸಣ್ಣ ಮೆಣಸನ್ನು ಪುಡಿ ಮಾಡಿ ಸ್ವಲ್ಪವೇ ನೀರು ಹಾಕಿ ಲೇಪನ ಮಾಡುವಷ್ಟರ ಮಟ್ಟಿಗೆ ಬಿಸಿಮಾಡಬೇಕು ನೋವಿದ್ದ ಜಾಗಕ್ಕೆ ಸ್ವಲ್ಪ ಬಿಸಿ ಇರುವ ಹೊತ್ತಿನಲ್ಲಿ ದಿನಕ್ಕೆ ಒಂದೆರಡು ಬಾರಿ ಲೇಪಿಸಬೇಕು. ಹೀಗೆ ಮಾಡಿದಲ್ಲಿ ನೋವು ಪರಿಹಾರ ಕಾಣಬಹುದು.
ಚರ್ಮರೋಗಕ್ಕೆ ಮದ್ದಾಗಿ ಕೂಡ ಹುತ್ತದ ಮಣ್ಣನ್ನು ಬಳಸಬಹುದು. ಸೋರಿಯಾಸಿಸ್ ಗೂ ಕೂಡ ಪರಿಹಾರ ಹುತ್ತದ ಮಣ್ಣಿನ ಲೇಪನದಿಂದ ಸಾಧ್ಯ. ಹುತ್ತದ ಮಣ್ಣನ್ನು ನುಣುಪಾಗಿ ಪುಡಿಮಾಡಿ ಇದನ್ನು ಗೋಮೂತ್ರದಲ್ಲಿ ಕಲಸಿ ಸೋರಿಯಾಸಿಸ್ ಇಲ್ಲವೇ ಚರ್ಮರೋಗದ ಜಾಗಕ್ಕೆ ಲೇಪಿಸುವುದರಿಂದ ಚರ್ಮ ರೋಗ ಕೂಡ ಗುಣವಾಗುತ್ತದೆ ಎನ್ನಲಾಗಿದೆ.
ಮಹಿತಿ: ಮಂಜುನಾಥ ಹೆಗಡೆ ಹುಡ್ಲಮನೆ ಮನೆ ನಾಟಿ ವೈದ್ಯರು
0 Comments