ನಿಮ್ಮ ಗ್ರಾಮ ಪಂಚಾಯಿತಿ ಮೊಬೈಲ್ ನಿಂದಲೇ ಮಾಹಿತಿ ಪಡೆದುಕೊಳ್ಳಿ

ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ ಮೂಲಕ ನೀವು ನಿಮ್ಮ ಪಂಚಾಯತದ ಬಹುತೇಕ ಮಾಹಿತಿಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ. ನಿಮ್ಮ ಪಂಚಾಯತ ಸದಸ್ಯರು, ನಿಮ್ಮ ಪಂಚಾಯತ ಸಿಬ್ಬಂದಿಗಳು ಅವರ ದೂರವಾಣಿ ಸಂಖ್ಯೆ, ಪಂಚಾಯತ ಯೋಜನೆಗಳು, ಫಲಾನುಭವಿಗಳು, ನಿಮ್ಮ ಪಂಚಾಯತದ ಕಾರ್ಯಕ್ಷೇತ್ರ, ಇವೆಲ್ಲವುಗಳ ಬಗ್ಗೆ ಮಾಹಿತಿಯನ್ನು ನೀವು ನಿಮ್ಮ ಸ್ಮಾರ್ಟ್ ಫೋನ್ ನಿಂದ ಪಡೆದುಕೊಳ್ಳಬಹುದು.

ಹೀಗೆ ಮಾಡಿ

1 ಇಲ್ಲಿ ಕ್ಲಿಕ್ ಮಾಡಿ ಸರ್ಕಾರದ ಅಧಿಕೃತ ವೆಬ್ಸೈಟ್ ಪ್ರವೇಶಿಸಿ

2 ಕರ್ನಾಟಕದ ನಕಾಶೆ ಕಂಡುಬರುತ್ತದೆ

3 ನಿಮ್ಮ ಜಿಲ್ಲೆಯನ್ನು ಟಚ್ ಮಾಡಿ ಆಯ್ಕೆಮಾಡಿ

4 ನಂತರ ನಿಮ್ಮ ತಾಲ್ಲೂಕನ್ನು ಆಯ್ಕೆಮಾಡಿ

5 ಬಲಗಡೆ ನಿಮ್ಮ ಪಂಚಾಯತದ ಹೆಸರನ್ನು ಕ್ಲಿಕ್ ಮಾಡಿ 

6 ಇಲ್ಲಿ ನಿಮಗೆ ಮೇಲ್ಭಾಗದಲ್ಲಿ ಅರ್ಜಿಯ ಸ್ವೀಕೃತಿ, ಆಸ್ತಿ ಸದಸ್ಯರು, ಸೇವೆಗಳು, ಅಧಿಕಾರಿಗಳು, ಪ್ರಗತಿಯಲ್ಲಿರುವ ಕಾಮಗಾರಿಗಳು ಈ ಎಲ್ಲಾ ಆಯ್ಕೆಗಳು ಕಂಡುಬರುತ್ತವೆ ಅದರ ಮೇಲೆ ಕ್ಲಿಕ್ ಮಾಡಿದರೆ ಅದರ ಬಗ್ಗೆ ವಿವರಗಳನ್ನು ನೀವೇ ಪಡೆಯಬಹುದು 

7 ಅಲ್ಲದೆ ನೀವು ಎಸ್ ಎಂ ಎಸ್ ಸೇವೆ ಕೂಡ ಪಡೆಯಲು ಸಾಧ್ಯವಿದೆ 

ಸೂ: ನಿಮ್ಮ ಪಂಚಾಯತದ ದಾಖಲೆಗಳು ಅಪ್ಲೋಡ್ ಆಗಿದ್ದರೆ ಮಾತ್ರ ನೀವು ವೀಕ್ಷಿಸಲು ಸಾಧ್ಯವಿದೆ 


Post a Comment

0 Comments